Graffiti ಗಣೇಶ

ಬೆನಕ ಬೆನಕ ಏಕದಂತ ಪಚ್ಚಕಲ್ಲು ಪಾಣಿಮೆಟ್ಲು………..ಹಳೇ ಕನ್ನಡ ಹಾಡುಗಳನ್ನು ಕಾರಲ್ಲಿ ಕೇಳ್ತಾ ಪ್ರಯಾಣ ಮಾಡ್ತಿದ್ರೆ ಆಯಾಸನೂ ಕಡಿಮೆ ಮನಸ್ಸಿಗೂ ಏನೋ ಮುದ. ಭಾವ, ಭಕ್ತಿ, ಚಿತ್ರಗೀತೆ, ಶಿಶು ಗೀತೆ ಹೊಸತು ಹಳೆಯದ್ದನ್ನೆಲ್ಲಾ ಅಲ್ಲೊಂದು ಇಲ್ಲೊಂದರಂತೆ ಮಿಕ್ಸ್ ಮಾಡಿ mp3 ಪ್ಲೇಯರ್ನಲ್ಲಿ ಕೇಳ್ತಾ ಸಿಡ್ನಿಯ Newtown/st peters ಬಡಾವಣೆ ಕಡೆ ಪ್ರಯಾಣ ಬಳಸುತ್ತಿರಲು ಅಲ್ಲೊಂದು ಅಚ್ಚರಿ ಕಾಣಿಸ್ತು ! ಗೋಡೆಯ ಮೇಲೆ ಗಣಪ ಪಕ್ಕದಲ್ಲೇ ಅವರಪ್ಪ ಶಿವಪ್ಪನ ದೊಡ್ಡ ಚಿತ್ರ ಅಯ್ಯಪ್ಪಾ ಅದ್ಯಾರಪ್ಪ ಈ ದೂರದ ಊರಲ್ಲಿ ಗ್ರಫಿಟಿ ಗಣೇಶ, ಶಿವನ ಚಿತ್ರ ಇಷ್ಟು ಚೆನ್ನಾಗಿ ?

Image

Corner of King st & Darley lane,Erskineville NSW Australia

ಅದಿರಲಿ ಅಲ್ಲಿ ಇಕ್ಕಟ್ಟಾದ ಓಣಿಗಳಲ್ಲಿ ಗೋಡೆಯಮೇಲಿನ ಬಣ್ಣಬಣ್ಣದ ಚಿತ್ರಗಳು ಅಪರೂಪದ ಡಿಸೈನ್ ಗಳು, ವಿಚಿತ್ರ ಮುಖಚಿತ್ರಗಳು.3D ಕಲೆ, ಯಾರೂ ಓಡಾಡದೇ ಇರೋ ರಸ್ತೆ,No Standing/No parking signಗಳು, ಒಂದು ಕ್ಷಣ ನಾವೆಲ್ಲಿದ್ದೀವಿ ಅನ್ನೋ ಭಯ ಮೂಡಿಸುತ್ತದೆ.ಮನೆಯ ಹಿಂಭಾಗದ ಗಾರಾಜ್ ಬಾಗಿಲುಗಳು ಮಾತ್ರ ಇರುವ ಕೆಲವು ರಸ್ತೆಗಳು ಅವು, ಗೋಡೆಗೂ ರೋಲರ್ ಶಟರ್ ಗಳಿಗೂ ವ್ಯತ್ಯಾಸವೇ ಇಲ್ಲದಂತೆ spray ಬಣ್ಣ.ರಸ್ತೆ ಬಿಕೋ ಅಂತಿದ್ರೂ ಒಮ್ಮೊಮ್ಮೆ ಫೋಟೋ ಶೂಟಿಂಗ್ ನಡೀತಿರುತ್ತೆ! ಪ್ರಸಿದ್ಧ ಆರ್ಟ್ ಹಾಗೂ ಮ್ಯೂಸಿಗ್ ಪತ್ರಿಕೆಗಳಲ್ಲಿ ಅವುಗಳ ಮುದ್ರಣ.

Image
ಕೆಲವೆಡೆ ಯಾರಿಗೂ ಎಟುಕದ ಕಡೆ ಕಷ್ಟಪಟ್ಟು ರಾತ್ರಿವೇಳೆ ಕದ್ದು ಮುಚ್ಚಿ ಹೋಗಿ ಬರೆದ ಬರಹಗಳು.ಬೇಲಿದಾಟಿ ಸಂಚಾರಿ ಬಸ್ಸು ರೈಲುಗಳ ಮೇಲೆ ಬರೆದ ಕಲಾತ್ಮಕ ಅನ್ನಿಸಿದರೂ ಅರ್ಥವಾಗದ ವಿಚಿತ್ರ ಅಕ್ಷರಗಳು.ಅಷ್ಟೇ ಏಕೆ ಬ್ರಿಸ್ಬೈನ್ ನಗರದಲ್ಲಿ ಕುಂಭದ್ರೋಣದಂತೆ ಸುರಿಯುತ್ತಿದ್ದ ಮಳೆ ಆ ರಾತ್ರಿ ಎರಡುಗಂಟೆಗೆ ಒಬ್ಬ ಯುವಕ ದೊಡ್ಡ ಚರಂಡಿಯಲ್ಲಿ ಹೆಲ್ಪ್! ಹೆಲ್ಪ್! ಅಂತ ಕೂಗಲು ಅಕಸ್ಮಾತ್ ಯಾರೋ ಆತನನ್ನು ಬಚಾವ್ ಮಾಡಿ ಪೋಲೀಸ್ ವಿಚಾರಣೆ ಮಾಡಲು ಆತ ಆ ಮೂಲಕ ಮತ್ತೆಲ್ಲೋ ಎತ್ತರದ ಭಯಾನಕ ಸ್ಠಳದ ತುಟ್ಟ ತುದಿಗೆ ತಲುಪಿ ಅಲ್ಲೊಂದು ಗ್ರಫಿಟ್ ಗೀಚುವ ಬಾಜಿ ಕಟ್ಟಿದ್ದನಂತೆ.ಛೇ! ಅನ್ಬೇಡಿ,

ಪ್ರಪಂಚದಾದ್ಯಂತ ಯುವಕರಿಗೇ ಹೆಚ್ಚಾಗಿ ಅಂಟಿರುವ ಈ ರೋಗ ಸರ್ಕಾರಕ್ಕೆ ಸವಾಲಾಗಿಬಿಟ್ಟಿದೆ.ವರ್ಷಕ್ಕೆ Sydney,NewCasle,Woolongong ಪ್ರದೇಶದಲ್ಲಿ ಸುಮಾರು 25ಮಿಲಿಯನ್ ಡಾಲರ್, ಇಡೀ NSW ರಾಜ್ಯಕ್ಕೆ  ಸುಮಾರು 100 ಕ್ಕೂ  ಹೆಚ್ಚು ಮಿಲಿಯನ್ ಡಾಲರ್ ಹಾಗೂ ಇಡೀ ದೇಶಕ್ಕೇ ಸುಮಾರು 300 ಮಿಲಿಯನ್ ಡಾಲರ್ಖರ್ಚು ಈ ಗ್ರಫಿಟಿ ಉಜ್ಜಿ ಅಳಿಸಲಿಕ್ಕೆ ಆಗ್ತಾ ಇರೋಖರ್ಚು. ಇನ್ನು ಅಮೇರಿಕಾದಂತಹ ದೇಶದಲ್ಲಿ ಕೇಳಬೇಕೇ ಗ್ರಫಿಟಿ ಅಳಿಸಲೆಂದೇ ಕ್ಲೀನಿಂಗ್ ಹುದ್ದೆ ಸಾವಿರಾರು ಜನರಿಗೆ ಸಿಕ್ಕಿಬಿದ್ದ ಈ ಪುಂಡರ ಕೌನ್ಸಿಲಿಂಗ್ ಗಾಗೇ ಇನ್ಕೆಲವು ಹುದ್ದೆ.


ಈ ರೀತಿ ಗ್ರಫಿಟಿ ಬಳಿಯುವರ ಬಳಿಗೆ ಹೋಗಿ ಅವರ ಕೂಗಿಗೂ ಕಿವಿಕೊಟ್ಟಾಗ ಬಂದಂತಹ ಉತ್ತರಗಳು ಹಲವಾರು.
*ಶಾಲೆಯಿಂದ ಹೊರ ಹಾಕಲ್ಪಟ್ಟವರು/ಉದಾಸೀನರಾದವರು ಹೆಚ್ಚಾಗಿ ಹರಯದ ಹುಡುಗರು.
*ಕತ್ತಲಲ್ಲಿ ಕಾಣದಂತೆ ಕಷ್ಟಕರ ಜಾಗಕ್ಕೆ ಹೋಗಿ ಗ್ರಫಿಟಿ ಮಾಡುವ ಸಾಹಸ/ಬೇರೆಯವರೊಡನೆ ಚಾಲೆಂಜ್ ಮಾಡುವುದು.
*ತಮ್ಮ ಮನಸ್ಸಿನ ವೇದನೆ ತೋರಿಕೊಳ್ಳುವ ಬಗೆ.
*ಇದರಲ್ಲಿ ಒಳ್ಳೆಯ ಕಲೆ ಪ್ರದರ್ಶನ ಕೂಡ ಇದೆ.
ಈ ಘನಂಧಾರೀ ಕೆಲಸ ಮಾಡಿ ಪೋಲೀಸರ ಹಾಗೂ ಕಾವಲುಗಾರರ ಕೈಗೆ ಸಿಕ್ಕಿಬಿದ್ದವರಿಗೆ ಅವರವರ ಧೈರ್ಯಕ್ಕೆ ತಕ್ಕಂತೆ ದಂಡ.
ಈ ಮೆಗಾ ಸೇಲ್ ಗಳಲ್ಲಿ ಹಾಕಿರ್ತಾರಲ್ಲಾ ಹಾಗೆ from $5 – upto $, ಇಲ್ಲೂ ಹಾಗೇ
*ಮನೆಮಠಗಳಮೇಲೆ ಗ್ರಫಿಟಿ ಗೀಚಿದವರಿಗೆ $1000 ಅಥವಾ 3 ತಿಂಗಳು ಮಾವನ ಮನೆ ವಾಸ ಅಥವಾ 73 ಗಂಟೆ ಗ್ರಫಿಟಿ ಉಜ್ಜೀ ಉಜ್ಜೀ ಅಳಿಸುವ ಶಿಕ್ಷೆ.
*ಸರ್ಕಾರೀ ಕಟ್ಟಡ, ಸಾರ್ವಜನಿಕ ಸಂಚಾರೀ ಬಸ್ಸು/ರೈಲು ಗಳ ಮೇಲೆ ಗೀಚಿದವರಿಗೆ ಮೇಲಿನಿನದಕ್ಕಿಂತ ಎರಡು ಪಟ್ಟು.
ಹೀಗೇ ಸುಮಾರು 26ಸಾವಿರ ಡಾಲರ್ ವರೆಗೂ ದಂಡ ಇದೆ. ಈ Vandalism ಹವ್ಯಾಸ / ಚಟ ಯುವಕರಲ್ಲಿ ಕೆಲವೇ ವರ್ಷ ಇರುತ್ತದೆ ಎಂಬುದು ಇತ್ತೀಚಿನ ವರದಿ.ಆದರೆ ಅದೇ ವಯಸ್ಸಿಗೆ ಬರುವ ಮುಂದಿನ ಪೀಳಿಗೆಯವರನ್ನು ತಡೆಯುವವರ್ಯಾರು.Drugs, Bullying, Racism ಗಳಂತೆ ಇದರ ಬಗ್ಗೆಯೂ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಸಮಯ ಮುಡುಪಾಗಿಡಬೇಕಾಗಬಹುದೇನೋ?
ಏನಾದರಾಗಲಿ ಈ ಗ್ರಫಿಟಿ ಒಂದು ಅನರ್ಥ ಸಾಧನೆ.

Advertisements

11 thoughts on “Graffiti ಗಣೇಶ

  1. Congratulations on your first post on the blog. Graffiti artists have existed since time immemorial – the murals left behind by aborigines and the graffiti scribbled by ancient Romans are priceless! Thank God no one thought of scrubbing them out.

  2. ನಿಮ್ಮ ಬ್ಲಾಗಾಯಣದ ಆರಂಭ ಸೊಗಸಾಗಿದೆ, ಶುಭಾಶಯಗಳು. ಬೆಂಗಳೂರಿನ ರಸ್ತೆ ಬದಿಯ ಗೋಡೆಗಳ ಮೇಲೆ ರಾರಾಜಿಸುವ “—————- ಚಳುವಳಿ”, “————-ಗೆ ಧಿಕ್ಕಾರ” , ಎಲ್ಲಾ ರೀತಿಯ “ಬಂದ್‍ಗಳು” ಸಿನೆಮಾ ಭಿತ್ತಿ ಪತ್ರಗಳು, ಇತ್ಯಾದಿ, ಇಲ್ಲಿನ ಗ್ರ್ಯಾಫ಼ಿಟಿ ಗಿಂತಲೂ ಜೋರಾಗೇ ಇರುತ್ತದೆ. ಒಂದು ವ್ಯತ್ಯಾಸ ಎಂದರೆ, ಅಲ್ಲಿ ಹಣ ಕೊಟ್ಟು ಊರಿನ ಅಂದಗೆಡೆಸಿರುತ್ತಾರೆ.

    • ತಮ್ಮ ಉತ್ತರಕ್ಕೆ ಥ್ಯಾಂಕ್ಸ್,ಇತ್ತೀಚಿಗೆ ಬೆಂಗಳೂರು, ಮೈಸೂರಿಗೆ ಹೋಗಿದ್ದಾಗ ಕೌನ್ಸಿಲ್ ಅವರೇ ನಿಂತು ಸರ್ಕಾರಿ ಕಟ್ಟಡಗಳ ಕಾಂಪೌಡುಗಳ ಮೇಲೆ ನಾಡಿನ ಹೆಸರಾಂತ ರಾಜರ,ಮಹನೀಯರ, ಸ್ಥಳಗಳ ಚಿತ್ರಬಿಡಿಸಿದ್ದಾರೆ ಅಲ್ಲಿನ ಮಟ್ಟಿಗೆ ಮಾತ್ರ ಚುನಾವಣೆ ಪ್ರಚಾರಕ್ಕೆ ಗೀಚುವುದು, ಚೀಟಿ ಅಂಟಿಸುವುದು ನಿಷಿದ್ಧ. ಮರ, ಕಲ್ಲುಬಂಡೆಗಳ ಮೇಲೆ ಇರುವುದು ಅಳಿಸಲಸಾಧ್ಯ.

  3. Congratulation on your Blog. Surprised to the graffiti of Ganesha dn Shiva in Sydney. In future there may be lot of other gods also come to sydney. In india grafiti of gods are on compound to avoid the public not use the space as Tiolets.

  4. ಮೊದಲನೆಯ ಮೂರು ಲೇಖನಗಳನ್ನು ಓದಿದೆ(ಅಜ್ಜಿಯ ಕಥೆ, ನೀಡ್ಲಸ್ ಮತ್ತು ವೀರಪ್ಪ). ಮೊದಲನೆಯದು ಉತ್ತಮ ‘ಪ್ರಭಂಧ’ ಅಥವಾ ಹಾಸ್ಯ ಲೇಪನದ ‘ಹರಟೆ’ ಎನ್ನಬಹುದು. ಎರಡನೆಯ ಲೇಖನ ವಿಚಾರವಿದೆ ಮತ್ತು ವಿಷಯವಿದೆ, ಚೆನ್ನಿದೆ. ಮೂರನೆಯದು ವರದಿಯ ವಿವರ, ಮೂರನ್ನು ಬೇರೆ ಬೇರೆ ರೀತಿ ಬರೆದು ಯಶಸ್ವಿಯಾಗಿದ್ದೀರಿ. ನಿಮಗೆ ಶುಭವಾಗಲಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s