ಮುಜರಾಯಿ ಸ್ಥಿತಿ – ಪುರೋಹಿತರ ಗತಿ

ಹತ್ತು ವರ್ಷದ ಕೆಳಗಿನ ಮಾತದು ಬೆಂಗಳೂರಿಗೆ ಸಮೀಪದ ಘಾಟಿ ಸುಬ್ರಹ್ಮಣ್ಯನ ಗುಡಿಗೆ ಹೋಗಿಬರುವ ದಾರಿಯಲ್ಲಿ ನನ್ನ ಹೆಂಡತಿಯ ಚಿಕ್ಕಮ್ಮನ ಊರಿಗೆ ಭೇಟಿ ಕೊಟ್ಟು ಹೋಗೋಣ ಅಂತ ಅಲ್ಲೇ ಕುಟುಂಬದವರೆಲ್ಲಾ ಉಳ್ಕೊಂಡೆವು. ಊರಿಗಿದ್ದ ಒಂದೇ ದೇಗುಲ ಅದಕ್ಕೆ ಎಲ್ಲರೂ ಹಳ್ಳಿದಾರಿಯಲ್ಲಿ ನಡೆದು ಹೋದೆವು. ವೆಂಕಟೇಶನ ಸಂಜೆ ಪೂಜೆ, ಆರತಿ ಮುಗಿಸಿ ವಾಪಸ್ ಆಗುವಾಗ ನಮ್ ಜೊತೆಗೇ ನಡೆದುಬಂದ ಪುರೋಹಿತರನ್ನು ಕುತೂಹಲಕ್ಕಾಗಿ ಕೇಳಿದೆ “ಸ್ವಾಮೀ ನಿಮಗೆ ಮುಜರಾಯಿ ಇಲಾಖೆ ಎಷ್ಟು ಸಂಬಳ ಕೊಡ್ತಾರೆ” ಎಂದು. ಅದಕ್ಕೆ ಅವರು ಹೇಳಿದ ಉತ್ತರ ಕೇಳಿ ನನಗೆ ಶಾಕ್ ಹೊಡೆದಂತಾಯ್ತು. “ಏ ತಗೊಳ್ಳಿ ಅವ್ರು ಕೊಡೋ ಕಾಸು ಎಣ್ಣೆ,ಬತ್ತಿಗೇ ಆಗಲ್ಲ ಬಿಡಿ” ಅಂದ್ರು. “ನಿಜವೇ?” ಸರಿ ಎಷ್ಟಿರಬಹುದು? ಒಮ್ಮೆ ಗೆಸ್ ಮಾಡಿ? ಉತ್ತರ ಆಡಿಕೊಳ್ಳುವ ಹಾಗೆ ಹೇಳಿದರು “150 ರೂ” ಹಾ! 150 ರೂ ನಾ! ದಂಗಾಗಬೇಡಿ 150 ರೂ ಕಡಿಮೆ! ಅದೂ ಒಂದು ವರ್ಷಕ್ಕೆ ! ಈಗ ಗಾಬರಿ ಆಗಿರಲೇ ಬೇಕು.ಸದ್ಯ ಸರ್ಕಾರಕ್ಕೆ ನಂತರ ಕರುಣೆಯ ಕಣ್ಣು ತೆರೆದು ಸಂಬಳ ಡಬಲ್ ಮಾಡಿ, ಆಮೇಲೆ ಒಂದೇ ಸಲ ಆರು ಸಾವಿರ ರೂಪಾಯಿ ಮಾಡಿದರು, ಈಗ ಹನ್ನೆರೆಡು ಸಾವಿರಕ್ಕೆ ಏರಿಸಿದ್ದಾರಂತೆ. ಆದರೂ ಇತರೆ ಆದಾಯವಿಲ್ಲದ ದೇವಸ್ಥಾನಗಳಲ್ಲಿ ತಿಂಗಳಿಗೆ ಸಾವಿರ ಯಾವ ಮೂಲೆಗೆ. ಹೌದು ನಿಜವೇ, ಅವರಿಗೂ ಶಾಲೆ ಮೇಷ್ಟ್ರುಗಳು ಮನೆ ಪಾಠ ಹೇಳಿ ಗಿಂಬಳ ಪಡೆಯೋ ಹಾಗೆ ಅವರಿವರ ಮನೆಗೆ ಹೋಗಿ ಹವನ, ಹೋಮ,ಪೂಜೆ, ತಿಥಿ ಇತ್ಯಾದಿ ಮಾಡಿ ಸಂಪಾದಿಸೋದು. ಆದ್ರೂ ಅವರದು ತೀರದಕಷ್ಟ, ಅದಕ್ಕೆ ಇರ್ಬೇಕು ಕಥೆಗಳಲ್ಲಿ “ಒಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು” ಅಂತಿರತ್ತೆ. ನಿತ್ಯ ದೇವಸ್ಥಾನದ ಜವಾಬ್ದಾರಿ ಬಿಟ್ಟು ಸರ್ಕಾರ ಕೊಡುವ ಹಣಕ್ಕಾಗಿ ಹತ್ತರು ಬಾರಿ ತಿರುಗಾಡಲೂ ಬೇಕಾಗುತ್ತದೆ. ಪುಟ್ಟ ಪುರಾವೆ ಈ ಕೆಳಗಿದೆ.

ಎಲ್ಲಾ ಆಟೊ ಡ್ರೈವರ್ ಗಳೂ ಕೆಟ್ಟವರಿರೋಲ್ಲ ಅನ್ನೋ ಹಾಗೆ ಎಲ್ಲರೂ ಬಡವರ ಪಟ್ಟಿಗೆ ಸೇರಲ್ಲ ಅನ್ನಿ.ಕೆಲ ಪುರೋಹಿತರು ಸರ್ಕಾರ ಕೊಡೋ ಸಂಬಳ ಅಕೌಂಟಿಗೆ ಬಂತಾ ಅಂತ ನೋಡೋಕ್ಕೂ ಹೋಗಲ್ಲ. ಇನ್ಕೆಲವರಿಗೆ ಮಂಗಳಾರತಿ ತಟ್ಟೆ ಹಣ ಎಣಿಸೋಕ್ಕೂ ಪುರುಸೋತ್ತಿಲ್ಲ.ರಾಜಾಜಿನಗರದಲ್ಲಿ ನಮ್ಮ ಮನೆ ಹತ್ತಿರ ಒಬ್ಬರು ಅಯ್ಯಂಗಾರ್ರು ಇದ್ರು, ಈಗ್ಲೂ ಇರಬಹುದು ಅವ್ರು ತಿರುಪತಿ ದೇವಸ್ಥಾನದಲ್ಲಿ ಪುರೋಹಿತರು. ವಾರಕ್ಕೆರಡುದಿನ ಅಲ್ಲಿಗೆ ವಾಯುದೂತ್ ಸರ್ವೀಸ್ ವಿಮಾನದಲ್ಲೇ ಹೋಗಿಬರುತ್ತಿದ್ದರು.

ದೇವಸ್ಥಾನಗಳು ಹೆಚ್ಚಿಗೆ ಆದಾಯ ಪಡೆಯುತ್ತಿದ್ದಂತೆ ಸರ್ಕಾರ ಅದರ ಜವಾಬ್ದಾರಿ ವಹಿಸುವುದು ಒಂದು ರೀತಿ ಸರಿಯೇ. ಅದಕ್ಕೇ ಇರಬೇಕು ಮಠಗಳು ಟ್ರಸ್ಟುಗಳು ಹೆಚ್ಚಾಗಿ ಸರ್ಕಾರದಿಂದಲೇ ಸಹಾಯ ಪಡೆಯುತ್ತಿವೆ. ಅಲ್ಲಾದರು ವಿದ್ಯೆ ಅನ್ನ ದಾನ ನಡೆಯುತ್ತಿವೆ. ಆದರೆ ಆಂಧ್ರದ ತಿರುಪತಿಯಂತೆ, ತಮಿಳುನಾಡಿಗೆ ಮಧುರೆ- ಪಳನಿಯಂತೆ,ಕೇರಳದ ಶಬರಿಮಲೈನಂತೆ ಕರ್ನಾಟಕಕ್ಕೆ ಹೇಳಿಕೊಳ್ಳುವ ಆದಾಯ ಹರಿದು ಬರುತ್ತಿರುವುದು ಖಂಡಿತ ಕಡಿಮೆ.ಆದರೆ ಮುಜರಾಯಿ ಅಧೀನದಲ್ಲಿರುವ ದೇಗುಲಗಳ ಸುತ್ತಲಿನ ಭೂಮಿ ಕೋಟಿಗಟ್ಟಲೆ ಬೆಲೆ ಬಾಳುವವು. ಕೋಟಿ ಬೆಲೆ ಅಲ್ಲ ಕೋಟಿಗಟ್ಟಲೆ ವರ್ಷಕ್ಕೆ ಆದಾಯ ತರುವಂಥದ್ದು.ಆ ಜಾಗವನ್ನು ಬೆಳವಣಿಗೆ ಮಾಡಿ ಬಾಡಿಗೆಗೆ ಬಿಡುಬಹುದು.ಆದರೆ ಅದನ್ನು ಹಳೇ ಬೆಲೆಗೆ ಲೀಸ್ ಗಾಗಿ ಬಿಟ್ಟು ಕೆಲವು ಕಡೆ ಮಾರೇ ಬಿಟ್ಟಿರುವುದೂ ಉಂಟು. ನಮ್ಮ ನಾಡಿನ ಇಡೀ ಈ ಭೂಮಿಯ ಬೆಲೆ ಕೂಡಿಸಿದರೆ ಪದ್ಮನಾಭನ ದೇವಸ್ಥಾನದ ನಿಧಿಗೇನೂ ಕಡಿಮೆ ಇಲ್ಲ.ಇದು ನನ್ನ ನುಡಿಯಲ್ಲ! ಮುಜರಾಯಿ ಇಲಾಖೆ ಹೇಳಿಕೆ.India today ಪತ್ರಿಕೆಯಲ್ಲಿ ರವಿಶಂಕರ್ ಹೇಳಿಕೆಯ ಪ್ರಕಾರ ಬರೇ ಕರ್ನಾಟಕದಲ್ಲಿ 2003 ರಲ್ಲಿ 79ಕೋಟಿ ಸಂಗ್ರಹ ಮಾಡಲಾಗಿತ್ತು,ಆದರೆ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೇ 7 ಕೋಟಿ ಮಾತ್ರ.ಹಜ್ ಯಾತ್ರೆಗೆ 59 ಕೋಟಿ, ಚರ್ಚ್ ಗಳಿಗೆ 13 ಕೋಟಿ.ಈ ಧೋರಣೆ ಇಡೀ ದೇಶದಲ್ಲಿ ಸಾಗಿದೆ.

ಹಿಂದೆ ದೇವಸ್ಥಾನ ನಡೆಸುವವರಿಗೆ ಹೆಚ್ಚೂ ಕಡಿಮೆ ಜಮೀನೂ ಇರ್ತಿತ್ತು. ಉಳುವವನಿಗೇ ಭೂಮಿ  ಅಂತಾದ್ಮೇಲೆ ಮುಜರಾಯಿ  ಕಡೆಯಿಂದ ಬರುವ ಹಣ ದೇವರ ದೀಪ, ಬತ್ತಿಗೂ ಸಾಲಲ್ಲ. ಹೀಗಾಗಿ ಅವರ ಕೈ ಮಂಗಳಾರತಿ ಹಣ ಹುಂಡಿಗೆ ಬೀಳುವ ಮೊದಲು ಅವರ ಜೇಬು ಸೇರುವ ಹಾಗಾಯ್ತು.ಇನ್ನು ಸೋಜಿಗದ ವಿಷಯವೆಂದರೆ ರಾಜ್ಯಾದ್ಯಂತ ಬಂದ ಹಣ ಬರೀ ಹಿಂದು ದೇಗುಲವೇ ಅಲ್ಲ ಮುಲ್ಲಾ, ಪಾದರಿಗಳಿಗೂ ಇದರಿಂದಲೇ ಸಂಬಳ ಪಾವತಿ ನಡೆಯುತ್ತಿತ್ತು.ಸುಮಾರು ಎಂಟೊಂಭತ್ತು ವರ್ಷಗಳ ಕೆಳಗಷ್ಟೇ ಇದು ನಿಂತಿದೆ ಎನ್ನುವುದೂ ಮುಜರಾಯಿ ಹೇಳಿಕೆ.

ಮುಜರಾಯಿ ಅವರು ದೇಗುಲದ ಆದಾಯ ಬರೀ ಪುರೋಹಿತರ ಹಿತಕ್ಕಲ್ಲದೇ ಜೀರ್ಣೋದ್ಧಾರಕ್ಕೂ ಬಳಸಬೇಕಿದೆ.ಅದಕ್ಕಾಗಿ ಕಾದು ಕುಳಿತಿರುವ ದೇಗುಲಗಳ ಪಟ್ಟಿ ನೂರಾರು.
ಇದು ಕೇವಲ ಧರ್ಮ ದೇಗುಲ ಮಾತ್ರವಲ್ಲ Construction comanyಗೂ ಲಾಭ, ಕೆರೆಯನೀರನು ಕೆರೆಗೆ ಚೆಲ್ಲಿ ಅಂದ್ ಹಾಗೆ. ಮತ್ತೆ ಅದೇ ಸರ್ಕಾರಿ ಟೆಂಡರ್ ಗೆ ಲಂಚ ಅಲ್ಲೂ ಕೆರೆಯ ನೀರನು… ಅನ್ವಯ ಆಗತ್ತೆ. ಮಂಡ್ಯದ ಅನೇಕ ಹೊಯ್ಸಳ ದೇವಾಲಯಗಳು, ಬೇಲೂರು ಹಳೇಬೀಡಿನಷ್ಟೇ ಸೌದರ್ಯ ಶಿಲ್ಪಕಲೆ ಉಳ್ಳ ಜಾವಗಲ್,ಸಿಡಿಲು ಬಡಿದು ಸೀಳಿ ಹೋಗಿರುವ ಮಾಕಳಿ ಬೆಟ್ಟದ ಶಿವಾಲಯ, ಅಧ್ಬುತ ವೀರ ನಾರಾಯಣ ವಿಗ್ರಹವುಳ್ಳ ಯಗವಕೋಟೆ ದೇವಾಲಯ.ಮೇಲ್ನೋಟಕ್ಕೆ ಸಾಧಾರಣ ವಿಗ್ರಹದಂತೆ ಕಂಡರೂ ಈ ವಿಷ್ಣು ವಿಗ್ರಹದ ಮೇಲೆ ಅಷ್ಟಲಕ್ಷ್ಮಿಯರನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಪುರೋಹಿತರು ಹೇಳುವಂತೆ ಇಂದ್ರನೇ ಇದನ್ನು ಸ್ಥಾಪಿಸಿದ ಎನ್ನುವುದು ಅದೆಷ್ಟು ಸತ್ಯವೋ ತಿಳಿಯದು,ಆದರೆ ನೂರಾರು ವರ್ಷದ ದೇವಾಲಯ ಅದು. ಜೀರ್ಣೋದ್ಧಾರ ಕಂಡಿಲ್ಲ.ಯಾರಾದರೂ ವಾಹನಗಳಲ್ಲಿ ಬಂದರೆ ಕುರಿಕಾಯುವ ಹುಡುಗರು ಹೋಗಿ ಬಡ ಪುರೋಹಿತರನ್ನು ಕರೆತರುವ ಪದ್ಧತಿ ಇಲ್ಲಿ.ಇನ್ನು ಅವರು ಬಂದಮೇಲೆ ದೇಗುಲದ ಬಾಗಿಲು ತೆರೆದಾಗ ಕಂಡದ್ದೂ, ಆ ದೇವರಿಗೂ ನಾಲ್ಕು ಹೂ ಇಲ್ಲದ್ದೂ ಎಲ್ಲಾ ಸೋಜಿಗವೇ.

 

ಇನ್ನು ನಾವು ಕಾಣದ, ಇದಕ್ಕಿಂತಲೂ ಕೆಟ್ಟಸ್ಥಿತಿಯಲ್ಲಿರುವ ದೇವಾಲಯಗಳೆಷ್ಟೋ. ಕೇವಲ ವಾರ್ಷಿಕ ಹಬ್ಬ,ಜಾತ್ರೆ ಸಮಯ ಬಿಟ್ಟರೆ ಪುರೋಹಿತರನ್ನು ಕೇಳುವವರೇ ಇಲ್ಲ.ಅಲ್ಲಿ ಪೇಟೆ/ಸಿಟಿಗಳಲ್ಲಿ ಹಬ್ಬಕ್ಕೆ ಅವರು ಯಾರ ಕೈಗೂ ಸಿಗುವುದು ಕಷ್ಟ,ಸಿಕ್ಕರೂ ಒಂದೇದಿನ ಹತ್ತು ಮನೆಗಳಿಗೆ ಪೂಜೆಗೆ ಒಪ್ಪಿಕೊಂಡಿರುತ್ತಾರೆ. ಗ್ರಾಮೀಣ ಪ್ರದೇಶಕ್ಕೂ ಡಾಕ್ಟರುಗಳನ್ನು ಸೇವೆ ಸಲ್ಲಿಸಲು ಒತ್ತಾಯಿಸುವಂತೆ ಪುರೋಹಿತರಿಗೂ ಆಗಬೇಕು.
ದೇವಸ್ಥಾನ ಬರೀ ಪೂಜೆಯ ನಂತರ ಬಾಗಿಲು ಹಾಕಿ ಬರುವ ಜಾಗವಾಗಿರದೇ ಸಂಗೀತ, ನೃತ್ಯ, ನಾಟಕ, ವೇದ, ಶಾಲಾ ಪಾಠ (ಟ್ಯೂಶನ್), ಹರಿಕಥೆ, ಹರಟೆ, ಹಾಸ್ಯಸಮ್ಮೇಳನ ಎಲ್ಲಾ ಕಾರ್ಯಕ್ರಮಕ್ಕೂ ಕೇಂದ್ರವಾದಲ್ಲಿ ಅಲ್ಲಿನ ಪುರೋಹಿತರಿಗೂ ಒಂದು ಜವಾಬ್ದಾರಿ, ಮರ್ಯಾದೆ ಬರಬಹುದೇನೋ ಅಂತ ನನ್ನ ಭಾವನೆ.

Advertisements

2 thoughts on “ಮುಜರಾಯಿ ಸ್ಥಿತಿ – ಪುರೋಹಿತರ ಗತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s