ಸಿಡ್ನೀಲೊಂದ್ ಕನ್ನಡ ಸಿನಿಮಾ

ಕನ್ನಡ ಸಿನಿಮಾ ಬಂದೈತ್ರಿ. ಅಯ್ಯೋ ಕನ್ನಡ ಸಿನಿಮನಾ? ಬಿಡಿ ಅದೇ ಲವ್ ಸ್ಟೋರಿ,ಮರಸುತ್ತುವ ಹಾಡು,ವಿಚಿತ್ರ ಹಾಡಿಗೆ ಸಂಬಂಧವೇ ಇಲ್ಲದಂತೆ ವಿದೇಶದಲ್ಲಿ ಶೂಟಿಂಗ್, ಐನಾತಿ ಬಾಲಿವುಡ್ ನಿಂದ ಕರೆತಂದ ಅರೆಬೆತ್ತಲೆ ಕುಣಿತದ ಐಟಂ ಸಾಂಗ್,ಪೋಲೀ ಡೈಲಾಗ್ ಚೀ ಥೂ ಮಕ್ಕಳಿಗೆ ಕನ್ನಡ ಸಿನಿಮಾ ತೋರಿಸಿ ಅನ್ನೋಕ್ಕೂ ಆಗಲ್ಲ ಬಿಡಿ.

ಅಪ್ಪಿ ತಪ್ಪಿ ಒಳ್ಳೆ ಸಿನಿಮಾ ಬಂದರೆ, ….ದ.ರೆ? “ಚೆನಾಗೈತಂತೆ ಆ ಫಿಲಿಂಮು ಕೇಬಲ್ ಅಪ್ರೇಟರ್ಗೆ ಏಳ್ಬಿಡು ಮುಂದಿನ ತಿಂಗಳು ಥಿಯೇಟರ್ನಿಂದ ಎತ್ತಾಕಿದ್ಮೇಲೆ ಕೆಬಲ್ನಲ್ ಹಾಕ್ಬುಡು” ಅಂತ ಹೇಳ್ತಿದ್ರು ನಮ್ ಪಕ್ಕದ್ ಮನೆಯಾಕೆ ಒಬ್ರು ಬೆಂಗ್ಳೂರಲ್ಲಿ.
ಇನ್ಕೆಲವರು ಧೈರ್ಯ ಮೆಚ್ಚಬೇಕು, ಅಂಗಡಿಗೆ ಹೋಗಿ ಹೊಸ ಸಿನಿಮಾ ಬಂದಿದ್ಯಲ್ಲ ಒಂದು ಕಾಪಿ ಇದ್ಯಾ? ಅಂತ ಕೇಳ್ಬೋದಾ? ಏನೋಪ್ಪಾ ಕನ್ನಡಾ ಸಿನಿಮಾಗಳು ನೆಟ್ನಲ್ಲಿ (ಬಿಟ್ಟಿಯಾಗಿ) ಸಿಗೋದೇ ಇಲ್ಲ ಅಂತ ಇನ್ನೊಬ್ರು. ಅದಕ್ಕೇ ಇರ್ಬೇಕು ಬಹಳ ಜನ ಪಾರ್ಟಿಗೆ ಹೋದಾಗ ಹಿಂದಿ ಸಿನಿಮಾ ಬಗ್ಗೆ ಮಾತಾಡ್ತಾ ಇರ್ತಾರೆ.
ಇಂಥಾ ಹೀನಾಯ ಸ್ಥಿತಿಯಲ್ಲೂ ಅದೆಷ್ಟೋ ಒಳ್ಳೊಳ್ಳೆ ಸಿನಿಮಾಗಳು ಬಂದ್ವು- ಹೋಯ್ತು ಅಂದ್ಕೋಳ್ಳಿ.ಕೆಲವು ಚೆನ್ನಾಗಿದೆ ಅನ್ನೋದ್ರೊಳಗೇ ಥಿಯೇಟರ್ ನಿಂದ ಎತ್ತಂಗಡಿ, ಪ್ರಚಾರವೇ ಇಲ್ಲ, ಒಳ್ಳೆಯ ನಿರ್ದೇಶಕ ಛಾಯಾಗ್ರಹಣ, ಸಂಗೀತ, ಸಂಭಾಷಣೆಗೆ ಹೆಸರಾದವರ ಚಿತ್ರವನ್ನು ಕಾಯ್ದು ನೋಡಬೇಕು, ಅದಿರ್ಲಿ ನಿರ್ಪಾಪಕರ ಕನಿಷ್ಟ ಅಸಲು ಸಂಗ್ರಹಾನೂ ವಸೂಲಿ ಆಗುವುದು ಕಷ್ಟ. ಆದ್ರೂ ನಾವು ಅದೆಷ್ಟು ಒಳ್ಳೆ ಚಿತ್ರಗಳನ್ನು ನೋಡಿಲ್ಲ ನೆನಪಿಸಿಕೊಳ್ಳಿ. ಅಂಥಾ ಪಿಚ್ಚರ್ ಈಗ ಬರಲ್ಲ ಬಿಡಿ ಅಂತಾ ಅದೆಷ್ಟೋ ಸಲ ಹೇಳಿದ್ದೂ ನಿಜ. ಉತ್ತಮ ಸಾಂಸಾರಿಕ, ಆಕ್ಷನ್, ಸಸ್ಪೆನ್ಸ್, ಸಂಗೀತಮಯ ಸಿನಿಮಾಗಳೂ ಇನ್ನೂ ಒಮ್ಮೆ ನೋಡಬೇಕು ಅಂತ್ ಹೇಳಿ ಮನೆಗೆ ಡಿವಿಡಿ/ವಿಸಿಡಿ ತಂದಿಟ್ಟು ಕೊಂಡದ್ದೂ ಉಂಟು. ಮಕ್ಕಳಿಗೂ ತೋರಿಸಬೇಕು ಅಂತ ಅಂದದ್ದೂ ಉಂಟು.ಅದ್ರೆ ನೋಡಕ್ಕೆ ಸಮಯ ಒದಗಿ ಬರೋದೂ ಬಹಳ ವಿರಳ.

ಸಿನಿಮಾ ಬಗ್ಗೆ ಮಾ| ಹಿರಣ್ಣಯ್ಯ ಹೇಳ್ತಿದ್ದ ಜೋಕ್ ನೆನಪಿಸಿಕೊಂಡರೆ ನಗು ತಡೆಯೋಕ್ಕೇ ಆಗಲ್ಲ.ಆ 16 ಸಾವಿರ ಅಡಿ ಸಿನಿಮಾ, ಡ್ರಿಲ್ ಥರಾ ಡಾನ್ಸ್, ಒಂದ್ ಬಂಡೆ ಮೇಲಿಂದ ವಿಲನ್ ಹಾರಿ ಬರೋದು, ರೇಪ್ ಸೀನ್,ಇನ್ನೊಂದ್ ಸಣ್ ಬಂಡೆ ಮೇಲಿಂದ ಹೀರೋ ಬಂದ್ ವಿಲನ್ನ ಒದ್ದು ಹೀರೋಯಿನ್ನ ಕರ್ಕೊಂಡ್ ಹೋಗೋದು, ಬಿಟ್ಟಿದ್ದಿದ್ರೆ ಅವ್ನೂ ಅದೇ ಮಾಡ್ತಿದ್ದ!….ಅವೆಲ್ಲಾ ಅವರ ಬಾಯಿಂದ ಕೇಳಿದ್ರೇನೇ ಮಜ.
ಒಮ್ಮೊಮ್ಮೆ ನಮ್ಮ ಈಗಿನ ಚಿತ್ರದ ಹಾಡು ಫೈಟುಗಳು ಮಕ್ಕಳಿಗಿರ್ಲಿ ನಮಗೇ ಹಾಸ್ಯವಾಗಿ ಕಾಣುತ್ತದೆ. ಆದ್ರೂ ಒಳ್ಳೋಳ್ಳೆ ಸಾಹಿತ್ಯದ ಹಾಡು ಬರೆಯುವವರಿಗೂ ಒಳ್ಳೆ ವೇದಿಕೆ /ಪ್ರಚಾರ ಸಿನಿಮಾರಂಗ. ಹೀಗಿರುವಾಗ ಮೊನ್ನೆ ನಮ್ಮ ಸಮುದಾಯದವರಾದ ಮೂಲತಹ ರಂಗಭೂಮಿ ಕಲಾವಿದ ಸುದರ್ಶನ್ ನಿರ್ದೇಶನದ “ಮುಖಾಮುಖಿ” preview ನೋಡುವ ಅವಕಾಶ ಬಂತು.ಸಿನಿಮಾಗೆ ಅಧ್ಬುತ ಹಿನ್ನೆಲೆ ಸಂಗೀತ ಇಲ್ಲ ಎನ್ನುವುದನ್ನು ಬಿಟ್ಟರೆ ಒಳ್ಳೆ ಕಥೆಗೆ ತಕ್ಕ ಸಂಭಾಷಣೆ ಬರೆದು,ಭಾಗಶಃ ಒಳಾಂಗಣ ಚಿತ್ರೀಕರಣ ಮಾಡಿದ್ದಾರೆ.ಅರ್ಧ ತಾಸು ಏನೂ ಸೀರಿಯಸ್ ಕಥೇನೇ ಇಲ್ವಲ್ಲಾ ಅನ್ನಿಸುವಾಗಾಗಲೇ ಕುತೂಹಲ ಕೆರಳಿ ಕಡೆಕಡೆಗೆ ತಡೆಯಲಾಗದಷ್ಟು ಬಿಗಿಯಾಗುತ್ತಾ ಬರುತ್ತದೆ, ಒಂದು ಕೊಲೆಯ ಸುತ್ತಿನ ಅನ್ವೇಷಣೆ, ಸುದರ್ಶನ್ ಅವರ ನಿರ್ದೇಶನ ಮೆಚ್ಚುವಂತಿದೆ.ಇನ್ನು ದತ್ತಣ್ಣನವರ ಅಭಿನಯ ಸಖತ್ !


ಇತ್ತೀಚಿಗೆ ಅವರ(ಸುದರ್ಶನ್) ಮನೆಗೆ ಮುಖ್ಯಮಂತ್ರಿ ಚಂದ್ರು ಬಂದಿದ್ರು, ಬಂದಿದ್ದಾಗ ಮಾತಿಗೆ ಮಾತು ಬೆಳೆದು ಅತಿಥಿಗಳು ತಿಂಡಿ ಮುಗಿಸಿ ನಗರ ಪ್ರದಕ್ಷಣೆಗೆ ಹೋದ ನಂತರ ಮಾತು ಮುಂದುವರೆದು, ಇಷ್ಟು ಶ್ರಮ ಹಾಕಿ ಮಾಡಿದ ಒಳ್ಳೆ ಸಿನಿಮಾನ ಯಾಕೆ ರಿಲೀಸ್ ಮಾಡ್ಬಾರ್ದು ಅನ್ನೋ ವಿಷಯ ಪ್ರಸ್ತಾಪ ಆಗಿ ಈಗ ಪರದೆ ಮೇಲೆ ನೋಡೋ ಕನಸು ನನಸಾಗಿದೆ.
ಸ್ಥಳ:Hurstville Civic Centre, 16 McMahon St, Hurstville NSW 2220. 5 August, ಆದಿನ ಎರಡು ಆಟ ಮೊದಲು 3 ಕ್ಕೆ ನಂತರ ಸಂಜೆ 6 ಕ್ಕೆ.ವಿವರಗಳಿಗೆ ಇಲ್ಲಿ ನೋಡಿ http://www.sugamakannada.com.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s