ಚಿಕ್ಕಮಗಳೂರ್ ಕಾಫಿ !!

ಸಿಡ್ನೀಲಿ ಚಿಕ್ಕಮಗಳೂರ್ ಕಾಫಿ! ಏ ತೆಗೀರಿ ಏನ್ ತಮಾಷೆ ಮಾಡ್ತೀರಾ?  ಅರೆ ಹೌದ್ರೀ ಓರಿಒರ್ಡನ್ ಸ್ಟ್ರೀಟ್ ಅಲೆಕ್ಸಾಂಡ್ರಿಯಾ ಒಮ್ಮೆ ಈ ಆಮದು ರಫ್ತು ಮಾಡುವ ಕಂಪನಿ ಅದು, ಅದರ ಹೆಸರು ನೆನಪಿಲ್ಲ, ಯಾವುದೇ ಹೆಸರುಗಳು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ತುಂಬಾ ವೀಕ್ ಬೇರೆ ನಾನು,ಒಮ್ಮೊಮ್ಮೆ ತಲೆಗೆ ಬಂದರೂ ನಾಲಿಗೆಯ ತುದಿಗೆ ಬರಲ್ಲ ಬಿಡಿ.ಏನೋ ವಯಸ್ಸಾಯ್ತು, ಮರವು, ಗಮನಿಸಲಿಲ್ಲ ಎಂಬ ನಾಲ್ಕಾರು ಕಾರಣ ನೀರಿನ ಗುಳ್ಳೆಯಂತೆ ಕಂಡು ಕಾಣೆಯಾಗುತ್ತದೆ.

                              5/80 O’Riordan Street, Alexandria, New South Wales
ವಿಷಯಕ್ಕೆ ಬರೋಣ, ಕೆಲಸದ ಪ್ರಯುಕ್ತ ಆ ಕಂಪನಿಗೆ ಹೋಗಿದ್ದಾಗ ಒಂದು ಮುಖ್ಯ ಇನ್ವಾಯ್ಸ್ ರೆಡಿಯಾಗುವುದಕ್ಕೆ ಐದಾರು ನಿಮಿಷ ಕಾಯಬೇಕಾದ ಪ್ರಸಂಗ ಬಂದಿತು.ಸುತ್ತಲೂ ಕಣ್ಹಾಯಿಸಿದೆ ರಾಕುಗಳಲ್ಲಿ ಪೇರಿಸಿದ್ದ ಕಾಫಿ ಬೀಜದ ಗೋಣಿ ಚೀಲಗಳು. ಎಲ್ಲಾ ಹೊರದೇಶಗಳಿಂದ ಬಂದಿರುವವು.ಕುತೂಹಲ ತಡೆಯಲಾರದೆ ಅಲ್ಲಿದ್ದ ಒಬ್ಬಾಕೆಯನ್ನು ವಿಚಾರಿಸಿದೆ “By any chance do you import Coffee from India?” ಅಂತ, ಅದಕ್ಕವಳು Yeh, a lot, yes we import from India ಅಂದಳು.  ವಾವ್ ಭಾರತದಿಂದಲೂ ಬರ್ತಿದೆ ಪರವಾಗಿಲ್ಲ ನಮ್ಮ ಕಾಫಿ ಬೆಳೆಗಾರರಿಗೂ ಲಾಭ ಆಗ್ತಿದೆ ಅಂದ್ಕೊಂಡ್ ಅಷ್ಟಕ್ಕೇ ಸುಮ್ಮನಾಗಲಿಲ್ಲ,

“Do you know which state its coming fom ?ಅಂದೆ I think It`s from south Indian state Karnataka “,  ಎಂದು ಅಲ್ಲಿದ್ದ ಮೂಟೆಗಳನ್ನು ತೋರಿಸಿದಳು,ಅದರಮೇಲೆ ಪರ್ಲ್ ಮೌಂಟನ್ ಅಂತ ಬರೆದಿತ್ತು. ನಮ್ಮೂರ ಕಾಫೀ!!! ನಾನೂ ಅದೇ ರಾಜ್ಯದಿಂದ ಬಂದದ್ದು,ಹತ್ತು ಸಾವಿರ km ದೂರ ನಮ್ಮೂರಿನ ರೈತರು ಬೆಳೆದ ಕಾಫಿಬೀಜ!ಒಮ್ಮೆ ಆ ಚೀಲವನ್ನು ಮುಟ್ಟಿದೆ,ಸಮಾಧಾನ ಆಗ್ಲಿಲ್ಲ ಎಲ್ಲಾ ಮೂಟೆಗಳ ಮೇಲೆ ಎರಡೂ ಕೈಗಳಿಂದ ಸವರಿದೆ! ಅಚ್ಚರಿ ಬೇಡ ಅದು ಅಭಿಮಾನದ ಪರಾಕಷ್ಟೆ ಬಿಡಿ ಬಲ್ಲವರೇ ಬಲ್ಲರು. ಅಷ್ಟರಲ್ಲಿ ಒಳಗೆ ಹೋಗಿ ತಿರುಗಿ ಬಂದ ಆ ಬಿಳಿ ಹೆಣ್ಣು ನನ್ನ ವರ್ತನೆ ನೋಡಿ, “Hey John make him a cuppa cheek maag lur coffee” ಅಂದ್ಳು, ಅಲ್ಲೊಂದು ಕಾಫಿ ಮಾಡುವ ಯಂತ್ರ ಇತ್ತು,ಆತ ಸುರ್ ಅಂತ ಮಾಡಕ್ಕೆ ಶುರುಮಾಡೇಬಿಟ್ಟ! ಅಯ್ಯೋ ಇದೆಂಥಾ ಅಚ್ಚರಿ ಸ್ಥಳೀಯ ಪರಂಗಿ ಪೆಣ್ಣೊಬ್ಬಳು  ಚೀಕ್ ಮಾಗ್ ಲೂರ್ ಕಾಫಿ ಅಂದಾಗ ಆದ ಆನಂದಕ್ಕೆ ಪಾರವೇ ಇಲ್ಲ.ಎಸ್ ಎಂದು ಸಂತೋಷಾಶ್ಚರ್ಯಗಳಿಂದ ಗಟ್ಟಿಯಾಗಿ ಕಣ್ಣರಳಿಸಿ ಹೇಳಿದೆ.ಅವಳು ನನ್ನ ಬಗ್ಗೆ ಏನೆಂದುಕೊಂಡಳೆಂಬ ಅರಿವೇ ಇರಲಿಲ್ಲ. ಎರಡು ಚಮಚ ಸಕ್ಕರೆ ಹಾಕಿಸಿಕೊಂಡು ಹೊರಗೆ ಬಂದು ಎರಡೂ ಕೈಗಳಿಂದ ಗಟ್ಟಿಯಾಗಿ ಕಾಗದದಿಂದ ಮಾಡಿದ ಲೋಟ ಹಿಡಿದು ಸೊರ್ ಸೊರ್ ಎಂದು ಹೀರಿದೆ, ತಕ್ಷಣ ಫೋನ್ ಮಾಡಿದ್ದು ಮೂಲ ಮೂಡಿಗೆರೆಯ ನಮ್ಮ ಸಿಡ್ನಿ ಕನ್ನಡ ಶಾಲೆಯ ಪ್ರೆಸಿಡೆಂಟ್ ಶ್ರೀಮತಿ ವೀಣಾ ಅವರಿಗೆ, ನನ್ನ ಸಂಭ್ರಮ ಕೇಳಿ ವಿಸ್ಮಯ ಅನ್ನಿಸಿರಬಹುದು ಅವ್ರಿಗೆ.

ಏನೇ ಆದ್ರೂ ಅಂದಿನ ಖುಷಿ ಪರಮಾನಂದವೇ ಅಂದರೆ ತಪ್ಪಿಲ್ಲ.ನಂತರ ಮತ್ತೊಮ್ಮೆ Sevenhills ನಲ್ಲೂ ಒಂದು ಗೋಡೌನ್ನಲ್ಲಿ ರಾಶಿ ರಾಶಿ ಮೂಟೆಗಳು ಕೊಡಗಿನಿಂದ ಬಂದ ಕಾಫಿ ನೋಡಿದೆ ಆದರೆ ಅಲ್ಲಿ ಫೋಟೋ ತೆಗೆಯಲು ಅವಕಾಶ ಇರಲಿಲ್ಲ.ಏನೇ ಇಅಲಿ ಹೋದಕಡೆಯಲ್ಲಾ,ವಸ್ತುಗಳಮೇಲೆಲ್ಲಾ  Made In China ಅಂತ ಕಾಣೋ ಈ ಕಾಲ್ದಲ್ಲಿ Product of India ಅಂದಾಗ ಅದೆಷ್ಟು ಖುಶಿ ಆಗುತ್ತೋ.

ಕರ್ನಾಟಕದ ನೆಲದಿಂದ ಬಂದದ್ದು ಅಂದ್ಮೇಲೆ ಕೇಳ್ಬೇಕೇ….

Advertisements

2 thoughts on “ಚಿಕ್ಕಮಗಳೂರ್ ಕಾಫಿ !!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s