ಅಸಾಮಾನ್ಯ ಈ ಈರಣ್ಣ!

ಊರ್ಬಿಟ್ ಊರಿಗೆ ಬಂದ್ರೂ ಮತ್ತೆ ಮಾತೃಭೂಮಿಗೆ ಮರಳುವ ಆಸೆ ಎನ್ ಆರ್ ಐ ಸಾಮಾನ್ಯರಲ್ಲಿ ಕಂಡಿದ್ದೇ. ಆದರೆ ಅದೆಷ್ಟು ಜನರಿಗೆ ಈ ಭಾಗ್ಯ ಬಂದಿದೆ ಹೇಳಿ. ಎಲ್ಲೋ ಬೆರಳೆಣಿಕೆಯಷ್ಟು ಜನ್ರಿಗೆ ಮಾತ್ರ.
“ಏನೇ ಆದ್ರೂ ನಮ್ಮೂರಿನ ಸಂಭ್ರಮನೇ ಚೆನ್ನ ಕಣ್ರಿ,ಹಬ್ಬದ್ ಹಿಂದಿನ ದಿನದ ವಾತಾವರಣ, ಹಬ್ಬದ ದಿನದ ಸಡಗರ, ಹಾಯಾದ ಸಂಜೆ ಯಾವುದೋ ರೆಸ್ಟೋರೆಂಟ್ ಈವಾರ ಇಲ್ಲಿ ಮುಂದಿನ ವಾರ ಅಲ್ಲಿ, ಈ ಹೋಟೆಲಲ್ಲಿ ಇದು ಫೇಮಸ್ ಅಲ್ಲಿ ಅದು ಫೇಮಸ್, ಫ್ಯಾಶನ್ ಸೀರೆ ಬೇಕಂದ್ರೆ ಅದೆಷ್ಟು ಅಂಗಡಿಗಳೂ ,ಅದೆಷ್ಟು ವೆರೈಟಿ” ಇದೆಲ್ಲಾ ನಮ್ಮ-ನಿಮ್ಮ ಮಡದಿ ಮಹಿಳೆಯರ ಮಾತೆಯರ ಮಾತು. ಇನ್ಕೆಲವರು “ಅದೇನ್ ಆಗೋಗಿದೆ ನಮ್ಮೂರು ಅಂತೀನಿ! ಇಲ್ಲೇನಿದೇರಿ ಅಲ್ಲಿಗ್ ಆದಷ್ಟು ಬೇಗ ರಿಟೈರ್ ಆಗೋದ್ರಲ್ಲಾದ್ದ್ರೂ ಹೋಗ್ಬಿಡಬೇಕಪ್ಪ” ಅನ್ನೋದೂ ಸಾಮಾನ್ಯ. “ಅಯ್ಯಪ್ಪಾ ಮೊನ್ನೆ ಹೋಗಿದ್ದೆ ಅದೇನ್ ಟ್ರಾಫಿಕ್ಕೂ! ಅದೇನ್ ಬೆಲೆಗಳು! ಬಡ್ಡಿ ಮಕ್ಳು ಕನ್ನಡಮಾತಾಡೋರೇ ಇಲ್ಲ ಬೆಂಗ್ಳೂರಲ್ಲಿ! ನಂ ಮಕ್ಕಳು ಕಲಿತ ಕನ್ನಡ ಬಳಸೋಕ್ಕೂ ಅವಕಾಶ ಬೇಡ್ವೇ” ಅನ್ನೋ ಕೊಂಕು ನುಡಿ. ಬಡವನ ಕೋಪ ಶಾಪ ಒಂದ್ ಹಿಡಿ. ಇನ್ನೂ ಇಲ್ಲಿ ಇದ್ಗೊಂಡ್ ಸಾಧನೆ ಮಾಡಿದ್ದೂ ಅಷ್ಟ್ರಲ್ಲೇ ಇದೆ ಬಿಡಿ.
ಇಷ್ಟರ ಮಧ್ಯೆ ಏಳೆಂಟು ವರ್ಷದ ಕೆಳಗೆ ಈರಣ್ಣ ಎಂಬ ವಿಶೇಷ ವ್ಯಕ್ತಿ ಪರಿಚಯ ಆಯ್ತು. ಎಲ್ಲರಂತವನಲ್ಲ ಬಿಡಿ ಈ ಈರಣ್ಣ. ಹೆಸರು ಹಳ್ಳಿಯದ್ದೇ, ಮನುಷ್ಯಾನೂ ಹಾಗೇ. ಭೇಟಿ ಮಾಡಿದವರಿಗೆಲ್ಲಾ ಕೈಜೋಡಿಸಿ “ನಮಸ್ಕಾರ್ರಿ” ಅಂತ ಏನೋ ಒಂಥರಾ ತಮಾಷೆ, ಸ್ವಚ್ಚ ಉತ್ತರ ಕರ್ನಾಟಕದ ಭಾಷೆ ಯಾಕಿವ ಹೀಂಗ್? ಏನೋ ಸರೀ ಇಲ್ಲ ಅನ್ನಿಸುತ್ತಿತ್ತು. ನಾಲ್ಕು ಮುದ್ದಾದ ಮಕ್ಕಳ ತಂದೆ ಈತ ಮಾಡ್ತಿದ್ದಾದ್ರೂ ಏನು? ಯಾವುದೋ ಮೆಕಾನಿಕಲ್ ಹುದ್ದೆ ಶುರುಮಾಡಿಕೊಂಡಿದ್ದವ ಮೂರು ಮಕ್ಕಳಿದ್ದಾಗಲೇ ಒಮ್ಮೆ ಸಕುಟುಂಬ ಪರಿವಾರ ಸಮೇತ ತನ್ನ ಕಾರಲ್ಲೇ ಇಡೀ ಆಸ್ಟ್ರೇಲಿಯಾ ಪ್ರವಾಸ ಮಾಡಿದ. ಕ್ಷಮಿಸಿ ಇನ್ಮುಂದಾದ್ರೂ ಅವರನ್ನ ರು ಅನ್ನಬೇಕಪ್ಪಾ ಮುಂದೆ ಓದಿ ನಿಮಗೂ ಅನ್ನಿಸುತ್ತೆ. ಜನ ಹೌದಾ ಅವರಾ? ಅಂತಿದ್ದೋರು, ಅಯ್ಯಾ ಅದೇನ್ ಆಸ್ಟ್ರೇಲಿಯಾ ಸುತ್ತಿ ಬರೋದ್ ಸಾಮಾನ್ಯ ವಿಷಯ ಬಿಡಿ ಅನ್ನೋವಾಗಾಗ್ಲೇ ಸ್ವಂತ ಟ್ರಾನ್ಸ್ಪೋರ್ಟ್ ಕಂಪನಿ ಶುರು ಹಚ್ಚಿಕೊಂಡಿದ್ದರು ಈ ಈರಣ್ಣನವರು. ಅದು ಬರೇ ಟ್ಯಾಕ್ಸಿಯಿಂದ ಶುರುವಾಗಿ, ನಂತರ ಮಿನಿ ಬಸ್,ಲಿಮೊಸಿನ್ ಸಂಖ್ಯೆ ಹೆಚ್ಚಾದವು. ಬಹಳ ಖುಷಿ ಕೊಡುವ ವಿಷಯವೆಂದರೆ ಅವರ ಒಂದು ವಾಹನದ ಮೇಲೆ ಆಸ್ಟ್ರೇಲಿಯಾ ಸಂಗಮ ಟ್ರಾನ್ಸ್ಪೋರ್ಟ್ ಅಂತ ಕನ್ನಡ ದಲ್ಲಿ ಫಲಕ! ಅದೂ ಸಿಡ್ನಿ ರಸ್ತೆಗಳಲ್ಲಿ!.ವಿಷಯ ಅಷ್ಟಕ್ಕೇ ನಿಲ್ಲಲ್ಲ ಅಸಾಮಾನ್ಯ ಅನ್ನುವ ಪದಕ್ಕೆ ಪೂರ್ಣ ಅರ್ಥ ಕೊಟ್ಟಿದ್ದು ಅವರು ಪೈಲೆಟ್ ಟ್ರೈನಿಂಗ್ ತಗೊಂಡು ವಿಮಾನ ಹಾರಿಸುವ ಸಾಹಸ ಮಾಡಿದಾಗ. ನಾಲ್ಕು ವರ್ಷದ ತಮ್ಮ ಕಡೇಯ ಮಗಳು “ಅಪ್ಪಾ ಅವರೆಲ್ಲಾ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ರೂ, ನನ್ನ ಯಾವಾಗ ಒಯ್ತೀ? ಅಂತ ಇಷ್ಟಪಟ್ಟ್ ಕೇಳಿದ ಕಾರಣ, ವಿಮಾನ ಬಾಡಿಗೆಗೆ ತೆಗೆದುಕೊಂಡು ಮತ್ತೆ ಆಸ್ಟ್ರೇಲಿಯಾ ಪ್ರವಾಸ ಮಾಡಿದರು. ಮಕ್ಕಳು “ಅಪ್ಪಾ ನಂಗೆ ಆ ಟಾಯ್ಸ್ ಬೇಕು” ಅಂದಾಗ ಅದೆಷ್ಟು ಸಾಮಾನ್ಯ ತಂದೆಯಂದಿರು “ಅಯ್ಯೋ ಅದು ಚೆನ್ನಾಗಿಲ್ಲಾ ಪುಟ್ಟ ಮುಂದಿನ ವರ್ಷ ಭಾರತಕ್ಕೆ ಹೋದಾಗ ಚೆನ್ನಾಗಿರೋದ್ ಕೊಡಿಸ್ತೀನಿ” ಅಂತ ಮುಂದಕ್ಕೆ ಹಾಕಿಲ್ಲಾ ನಾವುಗಳು.

ಇತ್ತೀಚಿಗೆ ಎರಡುಬಾರಿ ಭಾರತಕ್ಕೆ ವಾಪಸಾಗುವ ಪ್ರಯತ್ನ ಮಾಡಿ ಎರಡನೇ ಬಾರಿ ಸೆಟ್ಲ್ ಆಗಿದ್ದಾರೆ.ಸದ್ಯಕ್ಕೆ ಹೆಂಡತಿ ಮಕ್ಕಳನ್ನೆಲ್ಲಾ ಅಲ್ಲಿ ಬಿಟ್ಟು ತಮ್ಮ ಬಿಸನೆಸ್ ನೋಡಿಕೊಳ್ಳಲು ಸಿಡ್ನಿಗೆ ಹಿಂತಿರುಗಿದ ಶ್ರೀ ಈರಣ್ಣ ಗೋಟ್ಯಾಳರು ಬಂದ ಕೂಡಲೇ ನನಗೆ ಫೋನಾಯಿಸಿ ಹೇಳಿದ ಮಾತು ಬಹಳ ಸಂತೋಷ ಕೊಡುವಂಥದ್ದು. ಅಲ್ಲಿ ಇವರ ಮಗ ಬಸವರಾಜ್ ನೋಡೋಕ್ಕೆ ಆಸ್ಸಿ ಬಣ್ಣದ ಹುಡುಗನಿಗೆ ಕಿತ್ತೂರು ಚೆನ್ನಮ್ಮನ ನಾಟಕದಲ್ಲಿ ಒಬ್ಬ ಸೈನಿಕನ ಪಾತ್ರ ದಕ್ಕಿ, ಅವನ ಕನ್ನಡ ಮಾತಿನ ವೈಖರಿ – ಅಭಿನಯ ನೋಡಿ ಜನ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರಂತೆ. ಇದೇ ರೀತಿ ರಂಗನಾಥ್ ಪರಿಮಳ ಕುಂಟುಂಬದವರೂ ಬೆಂಗಳೂರಿಗೆ ವಾಪಸಾದಾಗ ಅಲ್ಲಿ ಶಾಲೆಯಲ್ಲಿ, ಇಲ್ಲಿದ್ದಾಗ ಕಲಿತ ಕನ್ನಡ ಬಹಳ ಪ್ರಯೋಜನಕ್ಕೆ ಬಂತು ಅಂದಾಗ ಸಿಡ್ನಿಯಲ್ಲಿ ಕನ್ನಡ ಶಾಲೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮಗೆ ಮಹದಾನಂದವೇ ಸರಿ.
ಒಮ್ಮೆ ಲಿವರ್ಪೋಲ್ ನಿಂದ ಪಕ್ಕದ ವಾಟಲ್ಗ್ರೋವ್ ಸಬರ್ಬ್ ಗೆ ಶಾಲೆಯನ್ನು ವರ್ಗಾಯಿಸಿದಾಗ ನಾವು ಎಲ್ಲಾ ಪೋಶಕರಿಗೂ ಸಭೆಕರೆದು ತಿಳಿಸಿದಾಗ ಈರಣ್ಣನವರು ಹೇಳಿದ ಮಾತು ಅಚ್ಚಳಿಯದೇ ನಮ್ಮ ಮನದಲ್ಲಿ ಉಳಿದಿದೆ.”ನಾರಾಯಣ್ ಅವ್ರೇ ನೀವ್ ಬೆಟ್ಟಾದ್ ಮ್ಯಾಗಾದ್ರೂ ಮಾಡ್ರಿ ನಿಮ್ ಕನ್ನಡ ಶಾಲೆಗೆ ನಾವ್ ಬರ್ತಿವ್ರಿ”ಅಂದ್ರು.ಇನ್ನೇನ್ ಬೇಕ್ ? ಎಲ್ಲರ ಪ್ರೋತ್ಸಾಹ ನಮ್ಮ ಕನ್ನಡ ಶಾಲೆ ಕಳೆದ ವರ್ಷ ಎರಡನೇ ಶಾಖೆ ಪ್ರಾರಂಭವಾಯ್ತು. ಎನ್ನೆರೆಡು ಕಡೆ ಡಿಮಾಂಡ್ ಇದೆ ಆದರೆ ಡೆಡಿಕೇಟೆಡ್ ಶಿಕ್ಷಕರೂ ಬೇಕಲ್ಲವೇ.
ಈರಣ್ಣನವರು ಅವರ ಬಗ್ಗೆ ಬರೆದಿರುವ ಈ ಸಾಮಾನ್ಯ ಲೇಖನಕ್ಕೆ ಅನುಮತಿ ನೀಡಿದ್ದಕ್ಕೆ ಧನ್ಯವಾದಗಳು.

Advertisements

5 thoughts on “ಅಸಾಮಾನ್ಯ ಈ ಈರಣ್ಣ!

  1. ಈರಣ್ಣನವರ ಬಗ್ಗೆ ಕಿರು ಪರಿಚಯ ಮಾಡಿರುವುದು ಬಹಳ ಶ್ಲಾಘನೀಯ. ನಿಮ್ಮ ಲೇಖನ ಮತ್ತು ವರದಿ ಬಹಳ ಸೊಗಸಾಗಿದೆ.
    ಆಸ್ಟ್ರೇಲಿಯಾ ಸಂಗಮ ಟ್ರಾನ್ಸ್ಪೋರ್ಟ್ ಅಂತ ಕನ್ನಡ ದಲ್ಲಿ ಫಲಕ ! ಸಂಗಂ ಟ್ರಾನ್ಸ್ಪೋರ್ಟ್ ಗೆ ಜೈ
    ಶುಭವಾಗಲಿ

  2. ನಾರಾಯಣ್ ಅವರೇ, ಲೇಖನ ತುಂಬಾ ಚೆನ್ನಾಗಿದೆ. ಓದ್ತಾ ಓದ್ತಾ ಇಷ್ಟು ಬೇಗ ಮುಗಿದೇ ಹೊಯ್ತ ಅನ್ನಿಸ್ತು. ಈರಣ್ಣನವರ ಪರಿಚಯ ಇಲ್ಲದವರಿಗೆ ಅವರನ್ನು ಒಮ್ಮೆ ಭೇಟಿ ಮಾಡಬೇಕು ಅನ್ನಿಸುವಂತಿದೆ. ಕನ್ನಡ ಶಾಲೆ ಬಗ್ಗೆ, ಮಕ್ಕಳ ಕನ್ನಡ ಕಲಿಕೆಯ ಬಗ್ಗೆ ತಿಳಿದು ಹೆಮ್ಮೆ ಅನ್ಸುತ್ತೆ. ಮಕ್ಕಳಿಗೆ ನಿಸ್ವಾರ್ಥದಿಂದ ಕಲಿಸುವ ನಿಮ್ಮ ಶ್ರಮ ಸಾರ್ಥಕವಾಯಿತು. ಹೀಗೆಯೇ ನಿಮ್ಮ ಕೆಲಸಕ್ಕೆ ಎಲ್ಲ ತಂದೆತಾಯಂದಿರಿಂದ ಪ್ರೋತ್ಸಾಹ ಸಿಗಲೆಂದು ಹಾರೈಸುವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s