ಬೇಲಿ

ಜನನ ನಿರೀಕ್ಷಿತವಾದರೆ – ಮರಣ ಅನಿರೀಕ್ಷಿತ. ಮರಣ ಜನನವಾದಾಗಲೇ ಕೆಲವರನ್ನು ಆಹ್ವಾನಿಸಿದರೆ,ಇನ್ಕೆಲವರಿಗೆ ಖಾಯಿಲೆಯಿಂದ,ಮತ್ತೆ ಕೆಲವರಿಗೆ ಬೇರೊಬ್ಬರ ತಪ್ಪಿನಿಂದ ಯುದ್ಧದಲ್ಲಿ ಸಾವು ಈಗಲೂ ನಡೆದಿದ್ದೇ. ಕೊಲೆ, ಆತ್ಮಹತ್ಯೆ ಸಂಖ್ಯೆಗಳೇನೂ ಕಡಿಮೆಯಿಲ್ಲ ಬಿಡಿ. ಪ್ರಕೃತಿ ವಿಕೋಪಕ್ಕೆ ಸಾವಪ್ಪಿದವರ ಲೆಕ್ಕವೇ ಇಲ್ಲ ಅನ್ನಿ. ಆದರೆ ಪ್ರಪಂಚದಲ್ಲಿ ಅನ್ಯಾಯವಾಗಿ ಅಪಘಾತಕ್ಕೆ ಸಾವಿಗೀಡಾಗುವ ಸಂಖ್ಯೆ ಎಲ್ಲದಕ್ಕಿಂತ ಹೆಚ್ಚು. ಕಾರಣ ಹುಡುಕುವುದು ನಮ್ಮ ಕೆಲಸವಲ್ಲವಾದರೂ “ಆದರೆ ಅದನ್ನು ತಪ್ಪಿಸಬಹುದಿತ್ತೇನೋ” ಅನ್ನೋ ಮಾತು ಎಲ್ಲರ ಅನಿಸಿಕೆ.

trainbus trapped
ರಸ್ತೆ ಅಪಘಾತ ಅವುಗಳಪೈಕಿ ಅತಿಹೆಚ್ಚು, ವಿಮಾನಗಳ ಇಳುಗಡೆ, ಹಡಗುಗಳ ಮುಳುಗಡೆ ಆಗಿಂದಾಗ್ಗೆ ಕೇಳಿ ಬರುತ್ತಿರುತ್ತದೆ.ರೈಲಿಗೆ ರೈಲು ಢಿಕ್ಕಿ ಹೊಡೆದ ಘಟಣೆಗಳು,ಹಳಿತಪ್ಪಿದ್ದೂ ಹಳೆಯದೇನಲ್ಲ. ತನ್ಪಾಡಿಗೆ ತಾ ಹಳಿಯಮೇಲೆ ಹರಿದಾಡುವ ರೈಲಿಗೆ ಜನರು ಅಡ್ಡಸಿಕ್ಕಿ, ರೈಲ್ವೇ ಕ್ರಾಸಿಂಗ್ ಬಳಿ ತಾಳ್ಮೆಗೆಟ್ಟು ಸಿಕ್ಕಿಬಿದ್ದು ಓಡುವ ಬಂಡಿಗೆ ನುಚ್ಚು ನೂರಾದವರ ಸಂಖ್ಯೆಯೂ ನೂರಾರು. ನಮ್ಮೂರಿನಲ್ಲಿ ರೈಲು ನಿಲ್ದಾಣಗಳ ಬಳಿ ಜನ ಹಳಿ ದಾಟುವುದು ತಪ್ಪಿಸಲು ಮತ್ತು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿ ಇಳಿದು ಓಡುವವರನ್ನು ತಡೆಯಲು ಎತ್ತರದ ಬೇಲಿ ಹಾಕಿರುತ್ತಾರೆ.ಆದರೆ ಪ್ರಪಂಚದಲ್ಲೇ ಅತಿಹೆಚ್ಚು ಉದ್ದದ ರೈಲು ಹಳಿಯ ಮಾರ್ಗ ಇರುವುದು ಭಾರತದಲ್ಲೇ. ಆ ಬೇಲಿಯ ಅವಶ್ಯಕತೆ ಅದೆಷ್ಟು ಮುಖ್ಯ ಎನ್ನುವುದು ಮುಂದೆ ಓದಿದಾಗ/ಲಗತ್ತಿಸಿರುವ ಚಿತ್ರ ನೋಡಿದಾಗ ನಿಮಗೇ ತಿಳಿಯುತ್ತದೆ.
ವಿದೇಶಗಳಲ್ಲಿ ರೈಲಿನ ಹಳಿಗೆ ದೇಶದುದ್ದಕ್ಕೂ ಬೇಲಿ ಇದೆ ಎನ್ನುವ ಹೋಲಿಕೆ ಇಲ್ಲಿ ಪ್ರಸ್ತಾಪವಲ್ಲ. ಉಗ್ರರ ಅಟ್ಟಹಾಸ ಅದೆಷ್ಟು ಕಾವಲಿದ್ದ ತಾಜ್ ಹೋಟೆಲ್,ಪಾರ್ಲಿಮೆಂಟ್ ಗಳಿಗೇ ತಪ್ಪಲಿಲ್ಲ, ಇಲ್ಲಿ ಲಕ್ಷಾಂತರ ಜನ ಸಂಚರಿಸುವ ರೈಲಿಗೆ, ಅದರ ಹಳಿತಪ್ಪಿಸುವವರ ಸಂಚನ್ನಾದರೂ ಕೊಂಚ ತಪ್ಪಿಸಬಹುದು ಒಂದು,,, ಮತ್ತೊಂದೆಂದರೆ ಮೂಕ ಪ್ರಾಣಿಗಳ ಬಲಿ. ಕುರಿ,ಮೇಕೆ,ನಾಯಿ,ನರಿ ಅಲ್ಲದೇ ಆನೆಗಳೂ ಬಲಿಯಾಗಿರುವ ಸುದ್ದಿ ಕೇಳಿದಾಗ ಸಂಕಟವಾಗುತ್ತದೆ. ಇದು ಇಂದಲ್ಲ ಎಂದಿನಿಂದಲೂ ನಡೆದು ಬಂದ ಕೆಟ್ಟಸುದ್ದಿ,
ಚಿಕ್ಕವರಿದ್ದಾಗ ನಾವು ಶಾಲೆಗೆ ಕೂಡಾ ಹಳಿ ದಾಟಿ ಹೋಗಬೇಕಿತ್ತು, ಕಂಬಿಯ ತಿರುವಿನಲ್ಲಿ ಇದ್ದ ಕಾಲುದಾರಿ ಎರಡು ರೈಲ್ವೆ ಹಳಿ ದಾಟುವಾಗ ಒಂದನ್ನು ದಾಟಿ ನೋಡಿದಾಗ ಸದ್ದಿಲ್ಲದೇ ಇಂಜನ್ ಒಂದು ಹತ್ತಿರ ಬಂದು ಪಾಂ! ಎಂದು ಹಾರ್ನ್ ಮಾಡಿದಾಗ ಮುಂದೆಹೋಗಬೇಕಾ ಹಿಂದಕ್ಕೆ ಬರಬೇಕಾ ಎನ್ನುವ ನಿರ್ಧಾರ ಮಾಡುವುದೇ ಸಾಹಸವಾಗಿತ್ತು.

aane
ದಕ್ಷಿಣ ಭಾತರದಲ್ಲಿ ಆನೆಗಳು ರೈಲಿನ ಹಳಿಯನ್ನು ದಾಟಲು ಹೋಗಿ ತಾಯಿ ಆನೆಯನ್ನು ಹಿಂಬಾಲಿಸಿದ ಮರಿಗಳು ಸಿಲುಕಿ ಸತ್ತ ಸುದ್ದಿ ಕಳೆದ ವರ್ಷ ತಮಿಳುನಾಡಿನಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಯಲಹಂಕದ ಬಳಿ ಕುರಿಗಳು ಸಾವಪ್ಪಿದ ಘಟನೆ ಮರೆಯುವಂತಿಲ್ಲ. ಮಂದೆಯಲಿ ಮುಂದಿರುವ ಕುರಿಯನ್ನು ಹಿಂಬಾಲಿಸುವ ಮಂಡೆ ಇಲ್ಲದ ಮುಂಡೇವು ರೈಲು ಓಡುತ್ತಿದ್ದರೂ ದಾಟುವ ಪ್ರಯತ್ನ ಮಾಡಿ ಮಾಡಿದವಂತೆ ಪಾಪ! ಇದು ಸಾಕ್ಷಿದಾರರ ನುಡಿ.

yalahanka

ಬೇಲಿ ಲಕ್ಷಾಂತರ ಕಿ.ಮೀ. ಉದ್ದಕ್ಕೆ ಹಾಕುವುದು ಸುಲಭದ ಕೆಲಸವೇ? ಹೌದೋ? ಅಲ್ಲವೋ? ತೀರ್ಮಾನಿಸಿ. ಇದರಿಂದ ನೂರಾರು ಜೀವ ಉಳಿಸಬಹುದಲ್ಲದೇ,ಸಾವು ನೋವುಗಳನ್ನೂ ತಪ್ಪಿಸಬಹುದಲ್ಲದೇ, ಈ ಯೋಜನೆ ಸಾವಿರಾರು ಮಂದಿಗೆ ಕೆಲಸವಾಗುತ್ತದೆ, ಬೇಲಿ ಮಾಡುವ ಕಾರ್ಖಾನೆಗೂ ಒಂದಷ್ಟು ಆರ್ಡರ್ ಸಿಕ್ಕಂತಾಯ್ತು, ಅದನ್ನು ಹೊತ್ತುತರುವ ಟ್ರಾನ್ಸ್ಪೋರ್ಟ್ ಕಂಪನಿಗೂ ಒಂದಷ್ಟು ಲಾಭ ಹೀಗೇ ಇನ್ನೂ ಕೆಲವರಿಗೆ ಲಾಭವಲ್ಲವೇ?

ಇನ್ನು “ಬೇಲಿಯೇ ಎದ್ದು ಹೊಲ ಮೈದಂಗೆ” ಅನ್ನುವ ಗಾದೆ ಜ್ಞಾಪಕಕ್ಕೆ ಬಂತು ನೋಡಿ. ಈ ವಿಚಾರ ರಾಜಕಾರಣಿಗಳಿಗೆ ಗೊತ್ತಾದರೆ ತಯಾರಿಸುವ ಕಾರ್ಖಾನೆಯಿಂದ ಹಿಡಿದು ಸಾರಿಗೆ ಕಂಪನಿ, ಹುದ್ದೆಗಾಗಿ ಅರ್ಜಿಹಾಕಿದವರೂ, ಊರಿನ ಬಳಿ ಇಬ್ಬದಿಗೆ ಹಾದುಹೋಗಲು ಇರಿಸುವ ಗೇಟ್ ಗೂ ಟೆಂಡರ್ / ಕಮಿಶನ್ ಹೊಡೆದು ಎಲ್ಲರಿಗಿಂತ ಹಣ ಅವರೇ ಮಾಡಿಬಿಡ್ತಾರೆ ಏನಂತೀರಿ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s