ಕನ್ನಡದವರಿಗೇ ಯವಾಗ್ಲೂ ಪೆಟ್ಟು

“ಸಿರಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ ” “ಜೈ ಕನ್ನಡಾಂಬೆ ” ’ ಜೈ ಭುವನೇಶ್ವರಿ” “ಗೋಕಾಕ್ ವರದಿ ಜಾರಿಗೆ ಬರಲಿ” “ಮಹಿಷಿ ವರದಿ ಜಾರಿಗೆ ಬರಲಿ” ” ರಕ್ತ ಕೊಟ್ಟೇವು ನೀರು ಬಿಡೆವು” ಹಿಂಗೆಲ್ಲಾ ಅರಚಿ ಕಿರುಚಿ ಪರಚಿಕೊಂಡರೂ ಕೇಳುವವರಿಲ್ಲ ನಮ್ಮವರ ಗೋಳು. ಮೊದಲಿನಿಂದಲೂ ಕರ್ನಾಟಕಕ್ಕೆ ಕಡೆಗಣನೆ, ಕಣ್ಣೊರೆಸುವ ಯೋಜನೆಗಳು, ಕನಸಾಗೇ ಉಳಿದ ಗಡಿ-ಜಲ-ಭಾಷೆ ಆಶ್ವಾಸನೆಗಳು. ದಶಕಗಳೇ ಕಳೆದರೂ ಕನ್ನಡ ಬರಹಗಾರರು, ಸಿನಿಮಾ ಅಥವಾ ಕ್ರೀಡೆಯಲ್ಲಿ ಬೆರಳೆಣಿಸುವಷ್ಟು ಜನ ಹೆಸರು ಮಾಡಿರುವುದು ಬಿಟ್ಟರೆ ಬೇರಾವ ವಿಷಯಗಳಲ್ಲೂ ಹೆಗ್ಗಳಿಕೆ ಅನ್ನಿಸಲೇ ಇಲ್ಲ. ಎಲ್ಲಾ ವಿಷಯಕ್ಕೂ ರಾಜಕಾರಣಿಗಳೇ ಕಾರಣ ಅನ್ನುವುದನ್ನು ಆಮೇಲೆ ಹೇಳೋಣ, ಯಾಕೇಂದ್ರೆ ಕಡೆಗೆ ಅಲ್ಲಿಗೇ ಬರಬೇಕು ಯಾಕೇಂದ್ರೆ ಮಾತು ಮುಗೀಬೇಕು ಮನೆಗೆ ಹೋಗಿ ಮನೀಕ್ಕೋ ಬೇಕು. ಸದ್ಯಕ್ಕೆ ರಾಜಕಾರಣಿಗಳನ್ನು ದೂರವಿಡೋಣ ಯಾಕೇಂದ್ರೆ ತಲೆ ಇರೋರಿಗಿಂತಾ ಭಾರೀ ತಲೆ ಇರೋರೇ ಹೆಚ್ಚು.ನಮಗೆ ತಲೆಗಿಂತ ತಲೆಗಳ ಅವಶ್ಯವಿದೆ ಅರ್ಥಾತ್ ಸಂಖ್ಯೆಗಳ ಅವಶ್ಯವಿದೆ.ದುಡ್ಡೂ ಗಿಡ್ಡು ಬೇಕಿದ್ರೆ,…. ನಮಗಲ್ಲಾ ಸ್ವಾಮೀ ಮಾಡಬೇಕಾದ ಕೆಲಸಕ್ಕೆ …….ಆ ತಲೆಗಳನ್ನ ವಿಚರಿಸಬಹುದು.

belagavi
ಬೆಳಗಾಂ ವಿಷಯಕ್ಕೆ ಬನ್ನಿ, ಬಗೆಹರಿಯದ ವಿಷಯಯವೇನಿಲ್ಲಾ ನಮ್ಮವರ ಒಲವು ಅತ್ತ ಸಾಗಲು ಕಾರಣ ನೋಡಬೇಕಾಗಿದೆ. ನಾವು ಪಕ್ಕದ ರಾಜ್ಯಕ್ಕೇ ಸೇರುತ್ತೇವೆ ಅನ್ನೋ ದೌರ್ಜನ್ಯದ ಮಾತು ಮತ್ತು MES ಹೇಳಿಕೆ
tha organisation will continue the 53-year-long struggle to merge Belgaum, Bidar, Bhalki, Karwar and Nippani areas into Maharashtra ಅಂತ ಕೇಳಿದರೆ ಯಾವ ಕನ್ನಡಿಗನಿಗೆ ತಾನೆ ಉರಿಯೋಲ್ಲ? ಮಹಾರಾಷ್ಟ್ರದ ನೂರಾರು ಹಳ್ಳಿಗಳು ನಾವು ಕರ್ನಾಟಕಕ್ಕೆ ಸೇರುತ್ತೇವೆ ಅಂದಾಗ MES ‘ಬೇಡಾ ನಾವೇ ಮತ್ತಷ್ಟು ಜಿಲ್ಲೆಗಳನ್ನೇ ಮಹಾರಾಷ್ಟ್ರಕ್ಕೆ ಸೇರಿಸ್ತೇವೆ’ ಅಂತಾರೆ. ಮೊನ್ನೆ ಅಲ್ಲಿ ನಡೆದ ಚುನಾವಣೆಯಲ್ಲಿ ಕನ್ನಡ ದ್ವೇಶಿಗಳಿಗೆ ಸರಿಯಾದ ಉತ್ತರ ಸಿಕ್ಕಿದೆ ಅನ್ನಿ.
ಮಂಗಳೂರು ಬಂದರಿಗೆ ಬಂದರೆ ಮಳಯಾಳಿಗಳ ಹಾವಳಿ ಕಾರವಾರದವರೆಗೂ ಅವರದ್ದೇ ಕಾರುಬಾರು,ಮಡಿಕೇರಿಯಲ್ಲಿ ವಲಸೆ ಹೋದವರು, ತೋಟಗಳಿಗೆ ಕೆಲಸಕ್ಕಾಗಿ ಬಂದವರು ಸ್ವಲ್ಪಸ್ವಲ್ಪವಾಗಿ ಮಾಲೀಕರಾಗುತ್ತಿದ್ದಾರೆ.ಕಾಸರಗೋಡು ಕೈಬಿಟ್ಟಂತೆ ಒಮ್ಮೆ ಕೊಡಗನ್ನೂ ಕೈಜಾರಿ ಕಳೆದುಕೊಳ್ಳುವುದು ದೂರವಿಲ್ಲ, ಇದಲ್ಲದೇ ಸ್ಥಳೀಯರಿಂದ ಆಗಿಂದಾಗೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಬೇರೆ. ಇನ್ನು ದಕ್ಷಿಣಕ್ಕೆ ಬಂದರೆ ಉದಕಮಂಡಲ ಎಂದೋ ತಮಿಳುನಾಡಿಗೆ ಸೇರಿದರೆ, ಚಾಮರಾಜನಗರದಿಂದ ಕೋಲಾರದವರೆಗೂ ತಮಿಳರ ದಬ್ಬಾಳಿಕೆ. ರಾಜಣ್ಣನ ಹುಟ್ಟೂರು ಗಾಜನೂರು (ತಮಿಳುನಾಡಿನ ಗಡಿಯಲ್ಲಿ) ಶೇ75%ಕ್ಕೂಮೀರಿ ಕನ್ನಡದವರಿದ್ದರೂ ಒಂದು ಕನ್ನಡ ಶಾಲೆಗೆ ಅನುಮತಿ ಇಲ್ಲ.ಅದೇ ನಮ್ಮ ನಾಡಿನಲ್ಲಿ ಉರ್ದು,ತೆಲುಗು,ತಮಿಳು,ಮರಾಠಿ.ಹಿಂದಿ ಇನ್ನೂ ಅನೇಕ ಪರಭಾಷೆಗಳ ಶಾಲೆಗಳು ದಿನೇ ದಿನೇ ಉಲ್ಬಣ. ಪಾವಗಡದಿಂದ ರಾಯಚೂರಿನವರೆಗೂ ಕನ್ನಡಿಗರು ಹೆಚ್ಚು ಜನರಿದ್ದರೂ ತೆಲುಗಿನ ಪ್ರಭಾವ, ರಾಜಕೀಯ ದಬ್ಬಾಳಿಕೆ ಜನರನ್ನು ದಿಕ್ಕೆಟ್ಟವರನ್ನಾಗಿಸಿದೆ. ರಾಮುಲು ರೆಡ್ಡಿಗಳು ಗೆದ್ದುಬಂದರೆ ಒಂದುದಿನ ರಾಯಲಸೀಮೆಯೇ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂಡಿಡುವ ದಿನ ದೂರವಿಲ್ಲ.karnataka
ಇನ್ನು ಬೆಂಗಳೂರೋ,, ಬೊಡ್ಕೋಬೇಕು ಎದೆಸೀಳಿದ್ರೆ ಎರಡು ಅಕ್ಷರ ಇಲ್ಲ ಅಂತಾರಲ್ಲಾ ಹಾಗೆ ಕೆಲವು ಬಡಾವಣೆಗೆ ಹೋದರೆ ಇದು ಕನ್ನಡ ನಾಡಿನ ರಾಜಧಾನಿನೋ ಅಥವಾ ಎಲ್ಲಿದ್ದೇವೆ? ಅನ್ನಿಸಬೇಕು.ಮೊನ್ನೆ ಸುದ್ದಿ ಓದಿದ ನೆನಪು, ಸರ್ಕಾರಿ ಆಸ್ಪತ್ರೆಗಳಲ್ಲೂ ಕನ್ನಡದ ರೋಗಿಗಳಿಗೆ ಹಾಸಿಗೆ ಇಲ್ಲ ! ಎಲ್ಲಿಗೆ ಬಂತೂ ನೋಡ್ರಿ!
ರೇಲ್ವೆ ಬಜೆಟ್ ಆಗಲೀ, ಕೇಂದ್ರದ ಪರಿಹಾರ ಧನವಾಗಲೀ,ಇತ್ತೀಚಿನ ರಾಜ್ಯದ ಚುನಾವಣೆ  ಆಶ್ವಾಸನೆಯಲ್ಲಿ ಭಾಷೆಯ ಉದ್ಧಾರಕ್ಕಾಗಿ ಬಿಡಿಗಾಸೂ ಮೀಸಲಿಲ್ಲ. ಯಾರಿಗೆ ಬೇಕಿದೆ ಕನ್ನಡ,ಗ್ರಾಮೀಣ ಜನರಿಗೆ ಒತ್ತಾಯ ಮಾಡುವ ಅವಶ್ಯವಿಲ್ಲ ಅಲ್ಲಿ ತಾನೇ ತಾನಾಗಿ ಉಳಿದಿದೆ.ಬೆಳೆಯುತ್ತಿರುವ ನಗರಗಳಿಗೆ ವಲಸೆ ಬಂದವರಿಗೆ ಬರುತ್ತಿರುವವರಿಗೆ ರುಚಿ ಅಥವಾ ಬಿಸಿ ಮುಟ್ಟಿಸಬೇಕಾಗಿದೆ.
ಹೆಸರಾಂತ ಕವಿಗಳು ತಮ್ಮ ಮನೆಯಲ್ಲಿ ಪರಭಾಷೆ ಮಾತನಾಡಿದರೂ ರಾಜ್ಯಕ್ಕೆ ಪ್ರಶಸ್ತಿ ತರುವಂಥಾ ಕೃತಿ ರಚಿಸಿದರು.ಈಗಿನವರು ಬಹುಶಃ ಎರಡು ತಲೆಮಾರುಗಳಿಂದ ವಾಸವಿದ್ದರೂ ಭಾಷೆ ಕೂಡಾ ಕಲಿಯದಷ್ಟು ದೌರ್ಜನ್ಯ.ಅಷ್ಟೇಕೆ ನಮ್ಮವರಿಗೇ ಇಲ್ಲದ ಅಭಿಮಾನ ಅವರಿಗೆಲ್ಲಿಂದ ಬರಬೇಕು.ಲಿಪಿಯಿಲ್ಲದ ತುಳು ಕೊಂಕಣಿಗರು ತಾವು ಮುಂಬೈಯಿಂದಲೇ ಬಂದವರಂತೆ ಮರಾಠಿ ಹಿಂದಿ ಮೇಲೆ ವ್ಯಾಮೋಹ. ಈಗ ಪ್ರಸ್ತುತ ಸ್ಥಿತಿ ಏನಾಗಿದೆ? ಅತಂದ್ರೆ
೧. ಸಾಹಿತ್ಯ,ಕಲೆಗಳಲ್ಲಿ ಕನ್ನಡ ಮೈಗೂಡಿಸಿಕೊಂಡಿರುವ ಮುಸ್ಲಿಮ್ಮರು -ಇದರಿಂದ ಸ್ವಲ್ಪ ಮಟ್ಟಿಗೆ ಕನ್ನಡದಿಂದ ಹಿಂದೂಸಂಘಟನಾಕಾರರ ಹಿನ್ನಡೆ.
೨. ಭಾಷೆ ಸರಳಮಾಡಿ, ಅತಿಯಾದ ಸಂಸ್ಕೃತ ಮಿಶ್ರಣ/ಪ್ರಭಾವ ಬೇಡ ಅಂದರೆ ಒಂದಷ್ಟು ವರ್ಗದ ಹಿನ್ನಡೆ.
೩. ದಿಟ್ಟ ನಾಯಕರ ಅಭಾವ, ಕನ್ನಡಪರ ಹೋರಾಟಕ್ಕೆ ಸಾಕಷ್ಟು ಪೈಲ್ವಾನರು ಇದ್ದರೂ ರಾಜಕೀಯ ಮಟ್ಟದಲ್ಲಿ ಗೆದ್ದುಬಾರದ ಹಿನ್ನಡೆ.
೪. ಗೆದ್ದುಬಂದವರು ಸದಾ ಕೇಂದ್ರಕ್ಕೆ ವಿರೋಧ ಪಕ್ಷವಾಗಿಯೇ ಇರೋದು, ಕೈಗೆ ಬಂದದ್ದು ಬಾಯಿಗೆ ಬಾರದಾಗುತ್ತಿದೆ ಅದರಲ್ಲೂ ಹಿನ್ನಡೆ.
ಯಾಕ್ ಹಿಂಗೆ?
ಜನಸಾಮಾನ್ಯರ ಭಾಷೆಯ ಅಭಿಮಾನ ನೋಡಿದರೆ ದೇವಾ ಯಾಕಪ್ಪಾ ನಮ್ಮ ಜನರಿಗೆ ಈ ಪಾಡು ಅನ್ನಿಸುವಹಾಗಾಗಿದೆ.ಕನ್ನಡದ ರಕ್ತ ಹರಿಯುತ್ತಿರುವ ಅಭಿಮಾನಿಗಳಿಗೆ ಈ ಮಾದರಿಯ ಲೇಖನ ಓದಿದಾಗ ಹೇಗೆ ರೋಷ ಉಕ್ಕುವುದೊ ಹಾಗೇ ಕನ್ನಡದವರತ್ರ ನಾವೂ ಕನ್ನಡದವರೂ,ತೆಲುಗಿನವರತ್ರ ಓ ಮಾವಾಳ್ಳು, ತಮಿಳಿನಿವರ ಬಳಿ ನಾಂಗೂ ತಮಿಳ್ ತಾ ಎನ್ನುವವರಿಗೆ ಎಮ್ಮೆ ಮೇಲೆ ಮಳೆ ಸುರಿದಂಗೆ ಬಿಡಿ ನಾಯಿಬಾಲ ಎಂದಿದ್ರೂ ಡೊಂಕು. ಹೊರನಾಡಿನಲ್ಲಿರುವ ಕನ್ನಡಿಗರು (so called) ಇಳಿಯುವುದು ನಮ್ಮೂರಲ್ಲೇ, ಮೂರು ಬೆಡ್ ರೂಂ ಮನೆ ಮಾಡುವುದು ನಮ್ಮೂರಲ್ಲೇ, ಮಸಾಲೆ ದೋಸೆ ಪಾನೀಪುರಿ ತಿನ್ನುವುದೂ ಅಲ್ಲೇ, ಊರು ಸುತ್ತುವುದೂ ಅಲ್ಲೇ, ವಾಸ ವಸತಿ ವಿಹಾರ ಅಲ್ಲೇ ಆದರೆ ಕನ್ನಡ ಮಾತ್ರ ಬೇಡವೇ ಬೇಡ !! 

(ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ಡದಾದ ಚಿತ್ರದಲ್ಲಿ ವಿವರ ಓದಿ)

kannada

ಹೇಳುತ್ತಾ ಹೋದರೆ ಇನ್ನೂರು ಪುಟದ ಪುಸ್ತಕ ಸಾಲದು ಅಂತಾರಲ್ಲ ಹಾಗೆ ನಮ್ಮವರ ಗುಣಗಾನ, ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸವಿದ್ದು ದೇಶದ ಎಲ್ಲಾ ಭಾಷೆಗಿಂತಾ ಅತಿಹೆಚ್ಚು ಶಾಸನಗಳು (೨೦ಸಾವಿರಕ್ಕೂ ಮೀರಿ) ಕನ್ನಡದಲ್ಲಿ ದೊರಕಿದ್ದರೂ,ಎಂಟು ಜ್ಞಾನಪೀಠ ದೊರಕಿದ್ದರೂ ನಮ್ಮವರಿಗೇ ಭಾಷೆಯಮೇಲಿನ ಪ್ರೀತಿ ವಿಶ್ವಾಸವಿಲ್ಲ.ವಿದೇಶಿಯರು ಸಂಸೃತ ಅರಿತು ನಮ್ಮವರಿಗೇ ಪಾಠ ಹೇಳುವಂತೆ ಕನ್ನಡನನ್ನು ಬೇರೆ ರಾಜ್ಯದವರು ಅರಿತು ನಮ್ಮವರಿಗೆ ಪಾಠ ಹೇಳುವ ಕಾಲ ಬಾರದಿರಲಿ ದೇವಾ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s