ಕೊಲೆಗಳು ಸಾರ್ ಕೊಲೆಗಳು!

ಮೊನ್ನೆ ಶನಿವಾರ ಬೆಳಗಿನ ಜಾವ ಕಣ್ ಬಿಡೋ ಮೊದಲೇ ಕೆಲಸದಿಂದ ಕರೆ, ಲ್ಯಾಪ್ ಟಾಪನ್ನ ಬೆಡ್ ಟಾಪ್ ಮೇಲೆ ಇಟ್ಕೊಂಡು ಕೆಲಸ ಮುಗಿಸಿ ಎರಡು ನಿಮಿಷ ಮಿಂಚಂಚೆ ನೋಡುವಾಂತ ಹಾಗೇ ಅಂತರ್ಜಾಲ ಹೊಕ್ಕರೆ ಬರೇ ಕೆಟ್ಟ ಸುದ್ದೀನೇ ಸಿಕ್ಕರೆ ಹೆಂಗ್ ಇರ್ಬೇಡಾ ಹೇಳಿ. ಭೂಕಂಪ, ಬಾಂಬು, ಸ್ಪೋಟ, ಮಾಸ್ ಮರ್ಡರ್ ಎಲ್ಲಾ ಆಕಸ್ಮಿಕ ಬರೋ ಸುದ್ದಿಯಾದರೂ ಅಪರೂಪವೇನಲ್ಲ ಬಿಡಿ ಈ ನಡುವೆ. saavu

ಆದರೆ ಇತ್ತೀಚೆಗೆ ಕೊಲೆಗಳು ಸಾರ್ ಕೊಲೆಗಳು! ಎಲ್ಲಿ ನೋಡಿದರೂ ಕೊಲೆಗಳು! ಈ ಸುದ್ದಿ ಬಾಂಬು ಭೂಕಂಪಕ್ಕೆ ಹೋಲಿಸಿದರೆ ಏನೂ ಇಲ್ಲ ಅನ್ನಿಸಿದರೂ ಸುದ್ದಿಯೊಳಗಿನ ಸುದ್ದಿ ಓದಿದರೆ (ಈ ಮಾತು ಎಲ್ಲೋ ಕೇಳಿದ್ದೀವಲ್ಲಾ ಅನ್ಬೇಡಿ ಸಿಡ್ನಿ SBS Radio ನಲ್ಲಿ ನಮ್ಮ ದೇವುಡು ಅವರು ನಡೆಸಿಕೊಡುವ ಕಾರ್ಯಕ್ರಮ ಕೇಳಿದ್ದವರಿಗೆ ಚೆನ್ನಾಗಿ ತಿಳಿದಿರುತ್ತದೆ, ಅದನ್ನು ನೆನೆದರೆ ನಗು ತಾನಾಗೇ ಹೊಮ್ಮುತ್ತದೆ) ಹಾ ವಿಷ್ಯಕ್ ಬನ್ನಿ ಈ ಕೊಲೆಗಳ ಸುದ್ದಿ ಓದಿದರೆ…. ಅದ್ಯಾಕ್ ಓದ್ಬೇಕ್ ಅಂತೀರಾ?…… ಅರೆ ಆವತ್ತು ಇದ್ದದ್ದೇ ಮೂರು ಹೆಡ್ ಲೈನ್ಸ್, ಬೆಳಗ್ಗೆ ಏಳೂ ದಾಟಿಲ್ಲ ಕನ್ನಡ ಪತ್ರಿಕೆ ಆನ್ ಲೈನ್ ನಲ್ಲಿ ಕನಿಷ್ಟ ಏಳೂವರೆ ವರೆಗೂ ಲಭ್ಯ ಇಲ್ಲ. ಕನ್ನಡ ಸುದ್ದಿಪತ್ರಿಕೆ ಓದೋದೇ ಮಜ ಅನ್ನಿ, ಆದರೆ ಬೇರೆ ಭಾಷೆಗೆ ಹೋಲಿಸಿದರೆ ಆನ್ ಲೈನ್ ಪತ್ರಿಕೆಗಳು ಕಡಿಮೆ ನಮ್ಮ ಕನ್ನಡದಲ್ಲಿ.
ಸರಿ ಸುದ್ದಿ ಏನ್ ಹೇಳಿ ಸುತ್ತಿ ಬಳಸಿ ಈ ಕಥೆಯಲ್ಲಾ ಯಾಕೇಂತೀರೋ,
ಮೊದಲನೇ ಸಾಲಿನಲ್ಲಿ !
೧. ಹೆಂಡತಿಯನ್ನು ಕೊಂದು ತುಂಡರಿಸಿ ನಾಯಿಗಳಿಗೆ ತಿನ್ನಲುಹಾಕಿದ ಒಬ್ಬ ಕ್ರೀಡಾ ಪಟು, Reports have said her body was fed to dogs, “The conduct of the crime of murder has sordid details and demonstration of absolute ruthlessness,” the judge said in her verdict ಮುಂದಕ್ಕೆ ತಾವೇ ಓದ್ಬೋದು
http://au.sports.yahoo.com/news/article/-/16331162/former-flamengo-goalkeeper-sentenced-to-22-years-for-murder/
೨.ಮುಸ್ಲಿಂ ಮಹಿಳೆ ಒಬ್ಳು ತನ್ಮಗ ಕುರಾನ್ ಬಾಯಿಪಾಠ ಮಾಡಿಲ್ಲಂತ….. ಛೆ ಛೆ ಹೀಗ್ ಮಾಡೋದೇ ? ಮುಂದಕ್ಕೆ ತಾವೇ ಓದ್ಬೋದು
http://www.bnp.org.uk/news/national/muslim-mother-kills-son-over-koran-lessons
೩. ಮತ್ತೆ, ಹೆತ್ತ ತಾಯೀನೇ ಮಗನ ಮರ್ಮಾಂಗ ಚಿಕ್ಕದಾಗಿದೆ ಅಂತ…. ಥೂ ಹೀಗೂ ಆಗ್ಬೋದಾ? ಮುಂದಕ್ಕೆ ತಾವೇ ಓದ್ಬೋದು
http://newsfixnow.com/2013/03/11/mother-kills-9-year-old-son-for-having-small-penis/
೪. ಸ್ವಂತ ಮಗನೇ ತಾಯಿಯನ್ನು ಕೊಂದು,ತಂದೆಯ…….ಮುಂದಕ್ಕೆ ತಾವೇ ಓದ್ಬೋದು
http://www.heraldscotland.com/news/home-news/son-admits-killing-mother-and-attacking-his-father.20441710
೫. ಶಾಲೆಯಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ತನ್ನ ರಕ್ತ ತಂದು…….ವಿಚಿತ್ರ! ಮುಂದಕ್ಕೆ ತಾವೇ ಓದ್ಬೋದು
http://au.news.yahoo.com/odd/a/-/odd/16331056/norway-teacher-fired-after-children-taste-her-blood/ kole


ಏ ಬಿಡಿ ಇದೆಲ್ಲಾ ವಿದೇಶಿ ಸುದ್ದಿ ಅಂದ್ರಾ ? ಇನ್ನು ನಮ್ ದೇಶದ ಸುದ್ದಿ ಪೇಪರ್ನಲ್ಲಿ ಜಾಗ ಸಾಕಾಗಲ್ಲ, ಪೋಲೀಸ್ ಅವ್ರಿಗೆ ೨೪ಘಂಟೆ ಸಮಯ ಸಾಕಾಗಲ್ಲ,ಟೀವೀ ಅವರಿಗೆ ಯಾವ್ದು ತೋರಿಸಬೇಕು ಬಿಡ್ಬೇಕು ಗೊತ್ತಾಗಲ್ಲ. ಅಷ್ಟೊಂದು ಕೊಲೆಗಳು ಸಾರ್ ಕೊಲೆಗಳು ಎಲ್ಲಾ ಓದಿ ತಲೆ ಕೆಡಸಿಕೊಳ್ಳದೇ ಇರೋಕ್ಕೂ ಆಗಲ್ಲ ಅನ್ನಿ.ಘಟನೆ ನಮ್ಮ ಹತ್ತಿರದಲ್ಲೇ ಆದರೆ ಅದೆಷ್ಟು ಗುಸುಗುಸು ಅಂತೀವಿ ನಾವು,ಅದೆಷ್ಟು ಅಂತೆ ಕಂತೆಗಳು. ಇಂಥಾ ವಿಷಯಗಳನ್ನ ಏನೂ ತಲೆಗೆ ಹಚಿಕೊಳ್ಳದವರೂ,ವಯಸ್ಸಿಗೆ ಬಂದ ಮಕ್ಕಳೂ, ತಮ್ಮದೇ ಲೋಕದಲ್ಲಿ ಲೀಲಾಜಾಲವಾಗಿ ಮೈಮರೆತವರೂ,ಪತ್ರಕರ್ತರೂ,ಜನಪ್ರಿಯರೂ, ಆಗಿಂದಾಗ್ಗೆ ಇಂಥಾ ಸುದ್ದಿ ಸ್ವಾರಸ್ಯಕ್ಕಾಗಿ ಅಲ್ಲದಿದ್ದ್ರೂ ಪ್ರಪಂಚದ ಆಗು ಹೋಗು ತಿಳ್ಕೊಳ್ಳೋಕ್ಕಾದ್ದ್ರೂ ಓದಬೇಕು. ಏನೇ ಹೇಳಿ ಮೂಲಕ್ಕೆ ಮೂಗ್ ಹಾಕಿ ನೋಡಿದರೆ ಇದೂ ಶಾಲೆ ಕಲಿಸದ ಪಾಠಗಳಲ್ಲಿ syllabus ಕವರ್ ಆಗದೆ ಉಳಿದ ಪಾಠ ಅನ್ನಿಸುತ್ತದೆ. ಪ್ರಪಂಚದ ಎಲ್ಲೆಡೆ ಇದರ ಅವಶ್ಯಕತೆ ಇಲ್ಲ, ಅಲ್ಲಿನ ಜನಜೀವನ ರೀತಿಯೇ ಒಂದು ಎಚ್ಚರ ಅಥವಾ ಜಾಗೃತಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s