ವೀರಪ್ಪನ್ ಗಾಗಿ ರಾಗಿ squad ! – ನಡೆದದ್ದಾದರೂ ಏನು?

ನರಹಂತಕ,ದಂತಚೋರ,ಕಾಡುಗಳ್ಳ,ಕೊಲೆಗಡುಕ ಇನ್ನೂ ಹತ್ತಾರು ಹೆಸರು ಆ ವೀರಪ್ಪನ್ ಗೆ. ಗಂಧ ತೇಗದ ಮರಗಳ್ಳನೂ ನಿಜ. ಇತ್ತೀಚೆಗೆ ಆತನ ಸಿನಿಮಾ ಚಿತ್ರೀಕರಿಸಿದರು. ಬಿಡುಗಡೆಗೆ ಮುನ್ನ ಹತ್ತಾರು ಟೀಕೆ ವಿಮರ್ಶೆ ಹೊರಬಿದ್ದವು.ಈ ಸಮಯದಲ್ಲಿ ಟೀವಿಯಲ್ಲಿ ಆಗಿನ ಕೆಲವು ಪೋಲೀಸರೂ ಕಾಣಿಸಿಕೊಂಡರು. ಒಬ್ಬೊಬ್ಬರಾಗಿ ಸತ್ಯವನ್ನು ಬಿಚ್ಚಿಟ್ಟರು ಆದರೂ ಪೋಲೀಸ್ ಕಾರ್ಯಾಚರಣೆಯ ಬಗ್ಗೆ ಯಾವುದೇ ವಿಷಯ ಹೊರಹಾಕುವಂತಿರಲಿಲ್ಲ.ಹೀಗಿದ್ದರೂ ದಕ್ಷ ಇನ್ಸ್ಪೆಕ್ಟರ್ ಶ್ರೀನಿವಾಸನ್ ಕೊಲೆಯಾದ ರೀತಿ, ವೀರಪ್ಪನ್ ಮತ್ತು ಅವನ ಪತ್ನಿ ಸ್ವಂತ ಮಗುವನ್ನೇ ಕೊಂದ ಕಥೆ,ಇನ್ನೂ ಹಲವು ಹುಬ್ಬೇರಿಸುವ ಸತ್ಯ ಸಂಗತಿಗಳು.veerapa

ವೀರಪ್ಪನ್ ತನ್ನ ವಿರೋಧಿಗಳನ್ನು ವಿಚಿತ್ರವಾಗಿ ಕೊಲ್ಲುವ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿತ್ತು. ಪೋಲೀಸ್ ಅಧಿಕಾರಿ ಶ್ರೀ ಅಶೋಕ್ ಕುಮಾರ್ ತೆರೆದಿಟ್ಟ ಒಂದು ಸಣ್ಣ ಉದಾಹರಣೆಯ ವಿವರಣೆಯೊಂದು ಹೀಗಿತ್ತು. ದಂತಕಳ್ಳನನ್ನು ಹಿಡಿಯಲು ಆತನ ವಿಷಯ ತಿಳಿಯಲು ಪೋಲೀಸ್ ಅಲ್ಲದೆ ಬೇರೆ ಬೇರೆ ತಂಡಗಳು ದಟ್ಟಕಾಡಿನಲ್ಲಿ ಕಾಲಿಟ್ಟಿದ್ದರು. ಅಂತೆಯೇ ರಾಗಿ squad ಅಂತ ಹರೆಯದ, ಗಟ್ಟಿಮುಟ್ಟಾದ ಹುಡುಗರ ತಂಡವೊಂದು (ಐದು ಮಂದಿ) ಕಾಡಿನಲ್ಲಿ ಅಡ್ಡಾಡುತ್ತಿರಲು, ಅವರಲ್ಲದೇ ಬೇರೆ ಕಾರ್ಯಾಚರಣೆ ನಡೆಸುವವರ ಕೈಗೆ ಸಿಕ್ಕು ಸಾಕಷ್ಟು ಏಟೂ ತಿಂದಿದ್ದರು. ಆದರೂ ಅವರ ಕೆಚ್ಚೆದೆಯಲ್ಲಿ ಪ್ರಾಣ ಭಯ ಅಂಜಿಕೆ ಕುಂದಿರಲಿಲ್ಲ. ಅವರ ಬಳಿ ಯಾವ ಆಯುಧವೂ ಇರಲಿಲ್ಲ, ಬರೇ ರಾಗಿಯ ಹಿಟ್ಟು ಅಂಬಲಿ ಮಾಡಿ ದಿನಕಳೆಯಬೇಕಿತ್ತು. ಒಮ್ಮೆ ಪೋಲೀಸರೇ ಅವರನ್ನು ಕಾಡಿನಲ್ಲಿ ಭೇಟಿಮಾಡಿ ಅವರ ನಿಷ್ಟೆ ಮೆಚ್ಚಿ ಅಲ್ಲೇ ಅವರಿಗೆ ನೂರು ರೂಪಾಯಿ ಕೊಟ್ಟಾಗ ಅವರ ಮುಖದಲ್ಲಿದ್ದ ಸಂತೋಷ ನೆನೆದರು. ಹುಡುಗರಿಗೆ ಯಾವುದೇ ಗುರುತಿನ ಚೀಟಿ ಕೊಡುವಂತಿಲ್ಲ ಕೊಟ್ಟು ಕೊಲೆಗಡುಕರ ಕೈಗೆ ಸಿಕ್ಕರೆ ಕೆಟ್ಟಂತೆಯೇ. ಹಾಗಾಗಿ ಅವರು ನಮ್ಮವರಿಂದಲೇ ಏಟು ತಿನ್ನಬಾರದು ಎನ್ನುವ ಉದ್ದೇಶದಿಂದ ಅವರಿಗೆ ಅಂಚೆಚೀಟಿ ಅಗಲದ ಒಂದು ಭಾರತದ ಸಿಂಹ ಮುದ್ರೆ ಇದ್ದ ಗುರುತು ಚೀಟಿ ಕೊಡಲಾಗಿತ್ತು.ಅದನ್ನು ಅವರ ಒಳ ಚಡ್ಡಿಯಲ್ಲಿ ಇಟ್ಟುಕೊಳ್ಳಲೂ ಸೂಚಿಸಲಾಗಿತ್ತು.veerappa
ಒಮ್ಮೆ ಐವರಲ್ಲಿ ನಾಲ್ವರು ಸ್ನಾನಕ್ಕಾಗಿ ನೀರಿಗಿಳಿದಿರಲು, ಅವರ ಬಟ್ಟೆ ಬಿಚ್ಚಿಟ್ಟಿರಲು, ಅಲ್ಲಿಗೆ ವೀರಪ್ಪನ್ ಗುಂಪು ಬಂದು, ಬಟ್ಟೆ ಬರೆ ಎಲ್ಲಾ ತಡಕಾಡಿ,ಇವರು ಗುಪ್ತದಳದವರೆಂದು ಅರಿತು ಎಲ್ಲರನ್ನೂ ಒಬ್ಬನ ಮುಂದೆ ನಿಲ್ಲಿಸಿ ಅವನ ಕಣ್ಮುಂದೆಯೇ ಎಲ್ಲರ ರುಂಡ ತುಂಡರಿಸಿದರು!!!! ಆತನಿಗೆ ಊರಿಗೆ ಹೋಗಿ ಪೋಲೀಸರಿಗೆ ಇನ್ನುಮುಂದೆ ಯಾರಾದರೂ ಈ ರೀತಿ ಬಂದರೆ ಅವರಿಗೂ ಇದೇ ಗತಿ ಎಂದು ಸುದ್ದಿ ತಿಳಿಸಲು ಹೇಳಿದರು. ಅದೆಷ್ಟು ಅಮಾನವೀಯ,ಕಠೋರ ಆ ದೃಷ್ಯ.
ಮೂವತ್ತಕ್ಕೂ ಹೆಚ್ಚು ವರ್ಷ ಪೋಲೀಸರಿಂದ ತಲೆ ಮರೆಸಿಕೊಂಡು ನೂರಕ್ಕೂ ಹೆಚ್ಚು ಕೊಲೆಗೆ ಕಾರಣನಾದ ವೀರಪ್ಪನ್ ಮತ್ತು ಸಹಚರರ ಬಗ್ಗೆ ಸಿನಿಮಾ ತೆಗೆದು ನಂತರ ಕಾಡುಗಳ್ಳನ ಹೆಂಡತಿಗೆ 2.5m ರೂ ಕೊಡಬೇಕಾದ ಪರಿಸ್ಥಿತಿ ಸಿನಿಮಾದವರ ಪರಿಸ್ಥಿತಿ ಇನ್ನೂ ಶೋಚನೀಯ.VEERAPPAN'S WIFE MUTHULAKSHMI

ಆಕಡೆ ಪೋಲೀಸ್ ಗಂಡಂದಿರನ್ನು (ವೀರಪ್ಪನ್ ಗುಂಡಿಗೆ ಬಲಿಯಾದವರು) ಕಳೆದುಕೊಂಡ ವಿಧವೆಯರಿಗೆ ಕೇವಲ ಎರಡು – ಎರಡೂವರೆ ಸಾವಿರ ಪಿಂಚಣಿ ! ಎಂಥಾ ಅನ್ಯಾಯ.
ಇಂಥಾ ಅನೇಕ ವಿಷಯಗಳು ಇನ್ನೂ ಪೋಲೀಸ್ ಫೈಲುಗಳಲ್ಲಿ ಅದೆಷ್ಟಿರಬಹುದು? ಏನೇ ಆಗಲಿ ಆ ಯುವಕರ ಹತ್ಯೆ ಅತಿ ಕಠೋರ ಹಾಗೂ ಖಂಡನೀಯ.  ನೆನ್ನೆ ಲೋಡ್ ಮಾಡಲಾಗಿತ್ತು ಈ ಪೋಸ್ಟ್,ಈದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಕೆಳಗಿನ ಸುದ್ದಿ.

parihara

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s