Drugs-ಚಟ ಯಾರು great?

ಆಸ್ಟ್ರೆಲಿಯಾದಲ್ಲಿ ನಾವು ವಲಸೆ ಬಂದಾಗಿನಿಂದ ಆ ಮೊದಲು ಬಂದವರೆಲ್ಲಾ ಹೇಳುತ್ತಿದ್ದ ವಿಷಯ ಸಾರ್ವಜನಿಕ ಸ್ಠಳಗಳಲ್ಲಿ ಸಿರಿಂಜ್ ಇರತ್ತೆ ಹುಷಾರು ಮುಟ್ಟೋಕ್ಕೆ ಹೋಗ್ಬೇಡಿ, ಡೇಂಜರ್ ಅಂತ.inj

ಈ ಸಿರಿಂಜ್ ಯಾಕೆ ಎಲ್ಲಾಕಡೆ ಬಿಸಾಕ್ತಾರೆ ಅನ್ನೋದಕ್ಕಿಂತ ಯಾರು ಸಪ್ಲೈ ಮಾಡ್ತಾರೆ ಅನ್ನೋ ಒಮ್ಮೆ ಫಾರ್ಮಸಿಗೆ ಹೋಗಿದ್ದಾಗ ನಾವು ಕ್ಯೂ ನಿಂತು ಔಷಧಿ ಪಡೆಯುತ್ತಿರಲು ಕೆಲವರು ಕೌಂಟರ್ ಬಳಿ ಬಂದು ಏನೋ ಹೇಳಿ ಕೂಡಲೇ ಕಾಸು ಕೊಟ್ಟು ಒಂದು ಕವರ್ ಕಸಿದು ಹೋಗುತ್ತಿದ್ದರು. ಆಗ ಅಂಗಡಿಯವನ್ನು ನಿಧಾನವಾಗಿ ವಿಚಾರಿಸಲು ವಿಷಯ ಸ್ವಲ್ಪ ತಿಳಿಯಿತು.ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಾಹಸ ಇದು ಇಷ್ಟವಿಲ್ಲದವರು ಇಲ್ಲಿಗೇ ನಿಲ್ಲಿಸಬಹುದು ಕುತೂಹಲ ಇದ್ದವರು ಮುಂದುವರೆಸಬಹುದು.
ವಿಷಯಕ್ಕೆ ಬರೋಣ.
ಈ ದೇಶದಲ್ಲಿ Needle exchange ಕಾರ್ಯಕ್ರಮ ಒಂದನ್ನ ಹಿಂದೊಮ್ಮ 1991 ರಲ್ಲಿ ಜಾರಿಗೆ ತಂದರು.ಅದಕ್ಕೂ ಮೊದಲು ಈ ಡ್ರಗ್ಗೀಗಳು/ ಯುವಕರೂ ಕದ್ದು ಒಂದೇ ಸೂಜಿಯನ್ನು ಹಲವಾರು ಜನ ಮತ್ತೆ ಮತ್ತೆ ಬಳಸುತ್ತಿದ್ದರು. HIV, hepatitis C ನಂತಹ ಹರಡುವ ರೋಗಗಳ ನಿಯಂತ್ರಣ ಆಗಲಿ ಎನ್ನುವ ಉದ್ದೇಶ ಇಟ್ಟು, ಡ್ರಗ್ ಮಾರಾಟ ಮತ್ತು ಅದನ್ನು ತಡೆಗಟ್ಟುವ ಕಾರ್ಯಕ್ಕಿಂತ ಹೆಚ್ಚು ಹಣ ಸುರಿದು ಈ Needle exchange ಕಾರ್ಯಕ್ರಮ ಜಾರಿಯಾಯ್ತು. ಏನಪ್ಪಾ ಅದರ ಅರ್ಥ ಅಂದರೆ ಡ್ರಗ್ ಸೇವಿಸುವ ಯಾವನೇ ತಾನು ಬಳಸಿದ ಸಿರಿಂಜ್ ಈ ಸ್ಥಳಗಳಿಗೆ ತಂದು ಕೊಟ್ಟರೆ ಅದರ ಬದಲು ಹೊಸ ಸಿರಿಂಜ್ ಸಿಗುತ್ತದೆ. ಅದೂ ಅಲ್ಲದೆ ಬ್ಯಾನ್ ಆದ ಪದಾರ್ಥ ಸೇವಿಸಿ ತಲೆ ತಿರುಗಿ ಬಿದ್ದವರಿಗೆ ಅವರ ಆರೈಕೆ ಮತ್ತು ಉಪಯೋಗಿಸುವ ಬಗೆ ಎಲ್ಲವೂ ಇಲ್ಲಿ ಲಭ್ಯ. ಒಟ್ಟಿನಲ್ಲಿ ಆದ್ರೆ ಸೇಫ್ ಆಗಿ ಹಾಳಾಗಿ, ಅಲ್ಲಿ ಇಲ್ಲಿ ಬಿದ್ದು ನರಳಿ ಸಾಯುವ ಬದಲು ಇಲ್ಲಿ ಚಿಕಿತ್ಸೆ ಪಡೆಯಿರಿ, ಹರಡುವ ರೋಗ ಸಿರಿಂಜ್ ಮೂಲಕ ಹಬ್ಬದಿರಲಿ ಎನ್ನುವುದು ಮೂಲ ಉದ್ದೇಶ.ಇದು ಬಹಳ ಸಹಾಯಕ ಅಂತ ಕೆಲವರ ಹೇಳಿಕೆಯಾದರೆ ಇನ್ಕೆಲವರು ಇದು ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂಗೆ ಅಂತಾರೆ.injectingroom
ಸಂಶೋಧನಾ ಅಂಕಿ ಅಂಶದಂತೆ 1991 ರಿಂದ 2010 ರ ವರೆಗೆ ಒಟ್ಟು
• 25 ಸಾವಿರ HIV, ಕೇಸ್ ತಡೆಗಟ್ಟಲಾಗಿದೆ!
• 21 ಸಾವಿರ hepatitis C ಕೇಸ್ ತಡೆಗಟ್ಟಲಾಗಿದೆ!
• 4590 ಜನರ ಜೀವ ಉಳಿಸಲಾಗಿದೆ!
• ಮೇಲ್ಕಂಡ ಎಲ್ಲರ ಇಡೀ ಜೀವನದ ನ ಖರ್ಚು ಸುಮಾರು 2.2 ರಿಂದ 7.7 ಬಿಲಿಯನ್ ಉಳಿಸಲಾಗಿದೆ!
ಅದರಲ್ಲಿ ಎಷ್ಟು ಜನ ದೇಶಕ್ಕೆ ತೆರಿಗೆಕಟ್ಟೋರು ಉಂಟು, ಇಂಥವರಿಗೇ ಹಣ ದುಂದುವೆಚ್ಚವಾಗುತ್ತಿದೆಯೇನೋ ಅನ್ನಿಸುತ್ತದೆ. ದುಷ್ಚಟಕ್ಕೆ ಪೂರಕವಾಗಿ ಐಸ್, ಕೋಕೈನ್, ಮಾರವಾನ ಇನ್ನೂ ಅನೇಕ ಮಾದಕ ವಸ್ತುಗಳನ್ನು ದೇಶದೊಳಕ್ಕೆ ಬಾರದ ಹಾಗೆ ತಡೆಗಟ್ಟುವುದೇ ಒಂದು ದೊಡ್ಡ ಯೋಜನೆ ಯಾಗಿದೆ.ಮಧ್ಯಪಾನ ಸಿಗರೇಟ್ ಸುಲಭವಾಗಿ ಕೈಗೆಟುವಹಾಗೇ ಇಲ್ಲಿನ ಯುವಕರಿಗೆ, ಅವು ಎಲ್ಲಿ ಸಿಗುತ್ತದೆ? ಎಂಬುದನ್ನು ಕೇಳಿ ಅಚ್ಚರಿಯಾಯಿತು. ಅದಷ್ಟು ಸಲೀಸು! ಆದರೂ ಇವ್ಯಾವುದೇ ಅರಿವಿಲ್ಲದೆ ಇರುವವರು ಕೆಲವರಿದ್ದರೆ, ಎಲ್ಲಾ ತಿಳಿದೂ ಹುಷಾರಾಗಿ ಕದ್ದು ರುಚಿ ನೋಡುವವರೂ ಇದ್ದಾರೆ, ಹಾಗೇ ತಮ್ಮ ಹುಷಾರಲ್ಲಿ ತಾವಿದ್ದು ಏನನ್ನೂ ಸೇವಿಸದ ಮಕ್ಕಳೂ ಇದ್ದಾರೆ. ಮಾನ್ಯ ಹಿರಣ್ಣಯ್ಯನವ ತಮ್ಮ ನಾಟಕದಲ್ಲಿ ಹೇಳುವಂತೆ ಆಗಿನ ಕಾಲದಲ್ಲಿ ಎಲ್ಲಾ ಊರ ಹೊರಗೆ ಸಿಗ್ತಿತ್ತು ಬಿಡಿ ಆಗ ಯಾವ ಚಟಾನೂ ಇಲ್ಲ ಅನ್ನೋದು ದೊಡ್ಡಗಾರಿಕೆ ಅಲ್ಲ ಮೂಲೆ ಮೂಲೆಯಲ್ಲೂ ಕೈಗೆಟಕುವ ಈ ಕಾಲದಲ್ಲೂ ಏನೂ ಮಾಡ್ತಿಲ್ಲ ಅನ್ನುವವರೇ ಗ್ರೇಟ್ .

Advertisements

2 thoughts on “Drugs-ಚಟ ಯಾರು great?

    • ಧನ್ಯವಾದ ಬದರಿ, ಹಿರಣ್ಣಯ್ಯನವರು ಎಲ್ಲಾ ವಿಷಯಗಳಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಹಾಸ್ಯವೆನಿಸಿದವರಿಗೆ ಹಾಸ್ಯ ಗಹನವಾದ ವಿಚಾರಗಳೂ ಅಡಗಿವೆ ಅವರ ನಾಟಕಗಳಲ್ಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s