ಜೀವನೋತ್ಸಾಹ

ಕನ್ನಡದ ಭಗವದ್ಗೀತೆ ಎಂದೇ ಖ್ಯಾತಿಯಾದ ಮಂಕುತಿಮ್ಮನ ಕಗ್ಗಗಳನ್ನು ಬರೆದ ಡಿ ವಿ ಗುಂಡಪ್ಪನವರ ಮತ್ತೊಂದು ಸಣ್ಣ ಪುಸ್ತಕ “ಬಾಳಿಗೊಂದು ನಂಬಿಗೆ” ಓದಿದ ನೆನಪು ಇನ್ನೂ ಹಸಿರಾಗೇ ಇದ್ದಾಗ ಇತ್ತೀಚೆಗೆ ಗುರುರಾಜ ಖರ್ಜಗಿ ಅವರ ಈ ಪುಸ್ತಕದ ಕುರಿತ ಉಪನ್ಯಾಸ ಕೇಳುವ ಅವಕಾಶ ಇದೇ ನಾಲ್ಕು ವರ್ಷದ ಕೆಳಗೆ ಒದಗಿತು.ju2

ಹಿಂದೊಮ್ಮೆ ಬೆಂಗಳೂರಿನಲ್ಲಿ ನಾಲ್ಕು ದಿನ ನಡೆದ ಉಪನ್ಯಾಸ ಕನ್ನಡ ಆಡಿಯೋ.ಕಾಂ ನಲ್ಲೂ ಕೇಳಲು ಲಭ್ಯವಿದೆ.ಕೇಳಲು ಶುರು ಮಾಡಿಕೊಂಡರೆ ನಿಲ್ಲಿಸಲು ಮನಸ್ಸೇ ಬರೋಲ್ಲ ಅನ್ನಿ, ಡಿ ವಿ ಜಿ ಪುಸ್ತಕ, ಖರ್ಜಗಿ ಮಾತು, ಎಂಥಾ ಕಾಂಬಿನೇಶನ್ ವಾಹ್ ! ಉಪನ್ಯಾಸದ/ವಿವರಣೆಯ ಒಂದು ಭಾಗದಲ್ಲಿ ಮೂರು ವಿಷಯದ ಪ್ರಸ್ತಾಪ ಮಾಡುತ್ತಾರೆ. ಜೀವನೋತ್ಸಾಹ, ಪುರುಷಪ್ರಯತ್ನ, ಲೋಕಸ್ನೇಹ.  ಪ್ರತಿ ವಿವರಣೆಗೂ ಉದಾಹರಿತವಾಗಿ ಒಂದೊಂದು ಅನುಭವ ಅಥವಾ ಘಟನೆ ಕೊಟ್ಟು ಕೇಳುಗರ ಮನಸ್ಸಿಗೆ ನಾಟುವ ವಾಕ್ ಚಾತುರ್ಯ ಖರ್ಜಗಿ ಅವರದ್ದು. ಅಲ್ಲಲ್ಲಿ ತಕ್ಕ ಕಗ್ಗದ ಉಲ್ಲೇಖ, ಅದರ ಸಾರಾಂಶ ಅಥವಾ ಪದ ಪದ ವಿಂಗಡಿಸಿ ಅರ್ಥ-ಅದಕ್ಕೊಂದು ಕಥೆ-ಉಪಕಥೆ, ಹೀಗೇ ಒಟ್ಟಿನಲ್ಲಿ ಇಂಚಿಂಚಿಗೂ ಕೊಂಚವೂ ಬೋರ್ ಆಗದ ಅವರ ಪ್ರವಚನ. ಅದರಲ್ಲಿ ಒಂದಾದ ಜೀವನೋತ್ಸಾಹದ ಬಗ್ಗೆ ಅವರು ಹೇಳಿದ ಮಾತಿನ ನೆನಪು ಹಂಚಿಕೊಳ್ಳುವ ಪುಟ್ಟ ಪ್ರಯತ್ನ ಇದು.

handicapped

ಮನುಷ್ಯ ಅಂದಮೇಲೆ ಒಂದಲ್ಲ ಒಂದು ತೊಂದರೆ,ಅನಾರೋಗ್ಯ,ಅಂಗವಿಕಲತೆ,ಅನಾನುಕೂಲ,ನ್ಯೂನತೆ ಯಾವುದಾದರೂ ಬೆನ್ನಹಿಂದೆಯೇ ಕಟ್ಟಿಕೊಂಡು ಹುಟ್ಟಿರುತ್ತೇವೆ, ಎಲ್ಲಾ ಅನುಕೂಲಗಳಿದ್ದವರಿಗೆ ಸೋಮಾರಿತನ ಕಾಡುತ್ತಿರುತ್ತದೆ. “ಅನುಗಾಲವು ಚಿಂತೆ” ಎಂಬ ಪುರಂದರ ನುಡಿ ಇಲ್ಲಿ ಜ್ಞಾಪಕಕ್ಕೆ ಬರುತ್ತದೆ,  ಜೀವನ ಸಾಗಿಸುವುದು ಮಾತ್ರವಲ್ಲದೆ, ಗುರಿಸೇರುವುದಿರಲಿ, ದಿನ ನಿತ್ಯದ ಕೆಲಸ ಸಾಗಿಸುವುದೇ ಕೆಲವರಿಗೆ ಈ ತೊಂದರೆಗಳು ಅಡ್ಡಿಯಾಗುತ್ತವೆ. ಹೀಗಿರುವಾಗ ಅದ್ಯಾವುದನ್ನೂ ಲೆಕ್ಕಿಸದೆ, ದೂರದೇ , ದೂಷಿಸದೇ ಇಟ್ಟ ಗುರಿಮುಟ್ಟುವ ಅಥವಾ ಇದ್ದಷ್ಟು ದಿನ ತಲೆಯೆತ್ತಿ ನಿಲ್ಲುವ ಉತ್ಸಾಹಕ್ಕೆ ಹತ್ತಾರು ಉದಾಹರಣೆ ಕೊಡುತ್ತಾರೆ,ಅದರಲ್ಲಿ ಎರಡು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ವಿಶಾಲವಾದ ಮರ, ಮರದ ತುಂಬ ಎಲೆ,ಹೂಗುಚ್ಚ. ಹೂವರಳಿ ಹಣ್ಣಾಗಿ ಹಣ್ಣೊಡೆದು  ಬೀಜವಾಗಿ ಹೊರಬರಲು, ಬೀಸಿದ ಗಾಳಿಗೆ ಹಾರುತ್ತಾ, ಅಲ್ಲಿಲ್ಲಿ ತೇಲುತ್ತಾ ಓಡಾಡುವ ವಾಹನದಮೇಲೆ ಬಿದ್ದು, ಬೇರಾವುದೋ ಊರಲ್ಲಿ ಎದ್ದು, ಯಾವುದೋ ವಸ್ತುವನ್ನೇರಿ, ಕಟ್ಟಡದ ಕಲ್ಲಿನ ಮೆಟ್ಟಿಲಿನ ಮೂಲೆ ಸೇರಿ, ನಡೆದಾಡುವವರ ಚಪ್ಪಲಿಯ ತುಳಿತಕ್ಕೆ ಸಿಕ್ಕದೆ ನಿಟ್ಟುಸಿರು ಬಿಡುತ್ತಾ ಅವಿತಿರಲು, ಗಾಳಿ,ಚಳಿ,ಪೊರಕೆಗೆ ತಾಗದಂತೆ ಇದ್ದು, ಅಲ್ಲೇ ಬಿದ್ದ ಮಳೆ, ಇದ್ದ ಧೂಳು ಆಶ್ರಯ ಪಡೆದು ಬೀಜ ಚಿಗುರೊಡೆದು ಪುಟ್ಟ ಸಸಿ-ಗಿಡ-ಮರ-ಹೆಮ್ಮರವಾಗಿ ಬೆಳೆದು ಬಿಡುತ್ತದೆ.tree in NorthSydney

ಹೆಂಚಿನ ಮನೆಯ ಮೇಲಿನ ಅಂಚಿನಲ್ಲಿ, ನೀರು ಹರಿಯಲು ಕಟ್ಟಿದ ಗಟ್ಟರ್ ಗಳ ಮೇಲೆ ಗಿಡಗಳು ಕೈಲಾದಷ್ಟು ಕಾಲ ಬದುಕುವ ಉತ್ಸಾಹದಿಂದ ಬೆಳೆಯುತ್ತವೆ. ದೊಡ್ಡ ಬೆಟ್ಟದಲ್ಲಿನ ಗಾತ್ರದ ಬಂಡೆಗಳ ಮೇಲಿನ ಬೊಗಸೆ ಗಾತ್ರದ ತಗ್ಗಿನಲ್ಲಿ ಗಾಳಿಗೆ ಬಂದ ಧೂಳಿನಲ್ಲೇ ಮೊಳಕೆ ಮೇಲೆದ್ದು ತಲೆ ಎತ್ತಿ ನಿಲ್ಲುವ ಹುಲ್ಲುಗಳು ಇದಕ್ಕೆ ಮತ್ತೊಂದು ಉದಾಹರಣೆ,north sydney

ಮುಂದುವರೆಸುತ್ತಾ ಅವರು  ವಿದ್ಯಾವರ್ಧಕ ಕಾಲೇಜಿನ ಲಲಿತ ಎಂಬ ಹುಡುಗಿಗೆ ಅನಾರೋಗ್ಯವಿದ್ದರೂ, ಮೈತುಂಬಾ ಚರ್ಮದ ಖಾಯಿಲೆ ಇದ್ದರೂ, ರಜೆ ಹಾಕಲು ಸಾವಿರ ಕಾರಣವಿದ್ದರೂ ಒಂದು ದಿನವೂ ತಪ್ಪದೆ ಪಾಠ ಕೇಳಲು ಬರುತ್ತಿದ್ದಳು, ಆಕೆಗಾಗಿ ಮಹಡಿಯ ಮೇಲಿದ್ದ ತರಗತಿಯನ್ನು ನೆಲಮಾಳಿಗೆಗೆ ವರ್ಗಾಯಿಸಲಾಯಿತು, ಛಲ ಬಿಡದೆ CA ಮಾಡಲು ಪಣತೊಟ್ಟ ಆಕೆ ಕಡೆಗೂ ತನ್ನಾಸೆ ನೆರವೇರಿಸಿಕೊಳ್ಳುತ್ತಾಳೆ. ತಂದೆಯ ವ್ಯಾಪರ ಎರಡು ವರ್ಷ ಯಸಸ್ವಿಯಾಗಿ ನಡೆಸುತ್ತಾಳೆ. ಮುಂದೆ ಸಾವಿನ ಸುದ್ದಿ… ಈ ವಿವರಣೆ ಅವರ ಬಾಯಿಂದ ಕೇಳಿದರೇ ಚೆನ್ನ, ಮೈ ಜುಂ ಎಂದು ಕಣ್ತುಂಬಿ ಬರುತ್ತದೆ. ಇಂತಹ ಹತ್ತಾರು ಘಟನೆ ಈ ಉಪನ್ಯಾಸದಲ್ಲಿ ಕೇಳಿಬರುತ್ತವೆ, ಕೈಕಾಲು ನೆಟ್ಟಗಿದ್ದ ಮಕ್ಕಳು ಏನಾದರೊಂದು ನೆವ ಹೇಳಿ ಶಾಲಾಕಾಲೇಜಿಗೆ ಚಕ್ಕರ್ ಹಾಕುವವರಿಗೆ ಒಮ್ಮೆ ಈ ತರಹದ ಅನುಭವದ ಮಾತು ಕೇಳಲು ಅವಕಾಶ ಮಾಡಿಕೊಡಬೇಕು.ju

ಮಿಕ್ಕೆರೆಡು ವಿಷಯಗಳಾದ ಲೋಕಸ್ನೇಹ ಮತ್ತು ಪುರುಷಪ್ರಯತ್ನವನ್ನೂ ಪರಿಚಯಿಸುವ ಪ್ರಯತ್ನ ಮುಂದಿನ ಬ್ಲಾಗ್ ಪೋಸ್ಟ್ ನಲ್ಲಿ ಮಾಡುವೆ.

ಈ ದ್ವನಿಸುರಳಿಯನ್ನು ನನ್ನ ಹಲವಾರು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೇನೆ. ಪ್ರತಿಯೊಬ್ಬರೂ ಆನಂದ-ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನನ್ನ ಜೀವನದಲ್ಲಿ ಬದಲಾವಣೆ ತಂದ ಈ ದ್ವನಿ ಸುರಳಿ ತಮಗೂ ಕೇಳಲು ಇಷ್ಟವಿದ್ದರೆ ಕಳಿಸಿಕೊಡುತ್ತೇನೆ.

Advertisements

4 thoughts on “ಜೀವನೋತ್ಸಾಹ

  1. ವಿಮರ್ಶಾತ್ಮಕವಾಗಿ ಬರೆದಿರುವ ನಿಮ್ಮ ಬರಹ, “ಬಾಳಿಗೊಂದು ನಂಬಿಕೆ” ಅರಿಯುವ ತವಕ ಹೆಚ್ಚಿಸುವಲ್ಲಿ ಸಂಪೂರ್ಣ ಸಫಲವಾಗಿದೆ. ಕೊಟ್ಟಿರುವ ಉದಹಾರಣೆಗಳು ಕೇಳಿಸಿಕೊಂಡು ರೋಮ ನಿಮಿರಿ, ಈಗಲೇ ಓದಬೇಕೆನಿಸಿತು. ಖಂಡಿತ ನಿಮ್ಮ ಸಲಹೆ ಮೇರೆಗೆ ಮಾತ್ರವಲ್ಲದೆ, ನೀವು ಹುಟ್ಟಿಸಿರುವ ತವಕಕ್ಕೆ ಓದುವೆ. “ಉದ್ಯೋಗಂ ಪುರುಷ ಲಕ್ಷಣಂ” ಬಹಳವಾಗಿ ಉಪಯೋಗಿಸುವ ಸೂತ್ರ. (ಇಲ್ಲಿ ಪುರುಷ ಲಿಂಗ ಸೂಚಕ ಅಲ್ಲ). ಮಾಡುವ ಹುಮ್ಮಸ್ಸಿದ್ದರೆ ಏನು ತಾನೇ ಸಾಧ್ಯವಿಲ್ಲ, ನಾವೆಲ್ಲರೂ ಕೇಳಿದ, ನೋಡಿದ, ಅನುಭವಿಸಿದ ಅದೆಷ್ಟು ನಿದರ್ಶನಗಳಿವೆ ಪ್ರತಿಯೊಬ್ಬರ ಬಳಿಯೂ … ಒಂದು ಜೀವನ ಮಾರ್ಗದರ್ಶಿಯ ಪರಿಚಯಕ್ಕೆ ಧನ್ಯವಾದಗಳು …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s