ಶರಪೋವ ಆಟ – ಮೈಮಾಟ

ಮರಿಯಾ ಶರಪೋವ ಟೆನ್ನಿಸ್ಸಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಸುಂದರಿ ಎನ್ನುವ ಮಾತು ಉತ್ಪ್ರೇಕ್ಷೆ ಅಲ್ಲ. 2004 ರಲ್ಲಿ Wimbledon, 2006 ರಲ್ಲಿ US open ,2008 ರಲ್ಲಿ Australian open, 2012 ರಲ್ಲಿ French open ಗೆದ್ದಿರುವ ಈಕೆ ಇದೇ ವೇಳೆಯಲ್ಲಿ ನಾಲ್ಕು ರನ್ನರ್ ಸ್ಥಾನವನ್ನೂ ತಲುಪಿದ್ದಾಳೆ. ಮೂಲತಃ ರಷ್ಯಾ ದೇಶದ ಈ ಬೆಡಗಿ ಜನಿಸಿದ್ದು 87ರಲ್ಲಿ ಆದರೂ ಅಮೇರಿಕಾ ಸೇರಿದ್ದು ಆರನೇ ವಯಸ್ಸಿಗೆ,ಆಕೆ ತರಬೇತಿ ಶಿಬರ ಸೇರಿದ್ದು ಮಾರ್ಟೀನಾ ನವ್ರಾಟಿಲೋವಾ ಬಳಿ, ಸ್ವತಃ ಮಾರ್ಟೀನಾಳೆ ಮರಿಯಾಳನ್ನು ಒಳ್ಳೆ ತರಬೇತಿ ಪಡೆಯುವ ಸಲಹೆಯ ಮೇರೆಗೆ ಅಮೇರಿಕಾ ಸೇರಿದಳು. ಟೀನೆಜ್ ನಲ್ಲೇ ವಿಂಬಲ್ಡನ್ ಕಿರೀಟ ಈಕೆಗೆ. sharapova 1
ಒಬ್ಬ ಆಟಗಾರ ಒಮ್ಮೆ ಆಸ್ಟ್ರೇಲಿಯನ್ ಓಪನ್ ನಂತಹ ಪಂದ್ಯಾವಳಿಯಲ್ಲಿ ಪ್ರವೇಶ ಪಡೆದು ಪ್ರತಿ ಪಂದ್ಯ ಗೆದ್ದಾಗ ಸಂಪಾದನೆ ಎಷ್ಟಿರಬಹುದು ಊಹಿಸಿ? ಇನ್ನೂರು ಮುನ್ನೂರು ಸಾವಿರ ಡಾಲರ್ ಗಳು ! ಕ್ವಾರ್ಟರ್ ಫೈನಲ್ ತಲುಪಿದರೆ ಇನ್ನೂ ಹೆಚ್ಚು, ಸೆಮೀಸ್ ತಲುಪಿದವರಿಗೆ ಐನೂರು ಸಾವಿರ ಇನ್ನೂ ಫೈನಲ್ ತಲುಪಿದವರಿಗೆ ಮಿಲಿಯನ್ ಗಟ್ಟಿ. ಹೀಗೆ ಪಂದ್ಯದಲ್ಲೇ ಇಷ್ಟು ಹಣ ಗಳಿಸುವ ಈ ಟೆನ್ನಿಸ್ ಪಟುಗಳು ಜಾಹಿರಾತುಗಳಲ್ಲಿ ಇದರಷ್ಟೆ ಹಣ ಗಿಟ್ಟಿಸುತ್ತಾರೆ. ಉದಾಹರಣೆಗೆ ಫೆಡರರ್ ಕಳೆದ ವರ್ಷದ ವಾರ್ಷಿಕ ಆದಾಯ 71 ಮಿಲಿಯನ್ ಡಾಲರ್, ಅತಿ ಚಿಕ್ಕ ವಯಸ್ಕಳಾದ ಶರಪೋವಳ ಕಳೆದ ವರ್ಷದ ಆಟದ ಆದಾಯ 29 ಮಿಲಿಯನ್ ಡಾಲರ್, ಇವಳ ಹಿಂದೆ ಮುಂದೆ ಈ ರೀತಿ ಸಂಭಾವನೆ ಪಡೆಯುವವರು ಇನ್ನೂ ಕೆಲವರು ಇದ್ದರೂ ಇಂದು ಈಕೆಯ ಪ್ರಸ್ತಾಪಕ್ಕೆ ಕಾರಣ ಮುಂದಕ್ಕೆ ಓದಿದಾಗ ನೀವೂ ಓಹೋ ಎಂದು ಹುಬ್ಬೇರಿಸಬಹುದು.GERMANY-PORSCHE-TENNIS
ಮರಿಯಾ ಶರಪೋವಾ ವಿದ್ಯಾಭ್ಯಾಸ ಮಾಡಿದ್ದು ಏನೇ ಇರಲಿ ಆದರೆ ಬಹಳ ವರ್ಷಗಳ ಕಾಲ Nike ಮತ್ತು TAG Heuer ಜೊತೆಗಿನ ಉನ್ನತ ಮಾರ್ಕೆಟಿಂಗ್ ಅಧಿಕಾರಿಗಳ ಸಂಗಡ ಕಾರ್ಯಾನಿರ್ವಹಿಸಿ ಮಾಸ್ಟರ್ಸ್ ಇನ್ ಮಾರ್ಕೆಟ್ಟಿಂಗ್ ಪದವಿಯಷ್ಟೆ ಅನುಭವ ಪಡೆದಳು. 700,000 ಡಾಲರ್ ಸ್ವಂತ ಹೂಡಿಕೆ ಇರುವ “Sugarpova ” ಎಂಬ ಮಿಠಾಯಿ ಕಾರ್ಖಾನೆ ಆರಂಭಿಸಿ 2013 ರಲ್ಲಿ 1.3 ಮಿಲಿಯನ್ ಚೀಲಗಳ ಮಾರಾಟ 25 ದೇಶಗಳಲ್ಲಿ ಮಾಡಿದಳು. ಬರೇ ಚೀನಾದಲ್ಲೇ 16000 ಚೀಲಗಳ ಮಾರಾಟ ದಾಖಲಾಯಿತು. ಶರಪೋವಾ ತನ್ನ ಹಣದಲ್ಲಿ ಕೆಲವು ಸಕಾರ್ಯವನ್ನೂ ಮಾಡುತ್ತಿದ್ದಾಳೆ UNDP ಸಂಸ್ಥೆಗೆ $250,000 ದಾನ ಮಾಡಿದ್ದಾಳೆ, Belauras ಶಾಲೆಗಳಿಗೆ $210,000 Scholarship ಗಾಗಿ ಮುಡುಪಿಟ್ಟಿದ್ದಾಳೆ.
ಇಲ್ಲೊಂದು ಹಳೇಯ ಮಾತು ಜ್ಞಾಪಕಕ್ಕೆ ಬರುತ್ತದೆ “ಹತ್ತು ಲಕ್ಷ ಇರುವವನು ತೃಪ್ತನೋ? ಹತ್ತು ಮಕ್ಕಳಿರುವವನು ತೃಪ್ತನೋ?” ಉತ್ತರ – ಹತ್ತು ಮಕ್ಕಳಿರುವವನು. ಏಕೆಂದರೆ ಅವರಿಗೆ ಹೊಟ್ಟೆ ಬಟ್ಟೆಗೆ ಹೊಂದಿಸುವುದೇ ಆತನಿಗೆ ಕಷ್ಟವಾಗಿರುತ್ತದೆ, “ಸಾಕಪ್ಪ ಇನ್ನು ಮಕ್ಕಳು” ಎನ್ನುತ್ತಾನೆ, ಆದರೆ ಹತ್ತು ಲಕ್ಷ ಇರುವಾತ “ಅದನ್ನು ಹೇಗೆ ಇಪ್ಪತ್ತು ಮಾಡಲಿ?” ಆ ಇಪ್ಪತ್ತನ್ನು ಮತ್ತೆ ನಲವತ್ತು ಮಾಡುವ ಯೋಚನೆ. ಕಡೆಗೆ ತೃಪ್ತಿಗೆ ಕತ್ತರಿಯೇ ಇಲ್ಲ.ಹಾಗೇ ಶರಪೋವ ಮುಂದೆ ಸುಗಂಧವುಳ್ಳ ಮೇಣದಬತ್ತಿ, ಸುಗಂಧ ದ್ರವ್ಯ ಇತ್ಯಾದಿಗಳ ಯೋಜನೆ ಹೊಂದಿದ್ದಾಳೆ. 25ಕ್ಕೇ ನಿವೃತ್ತಿ ಹೊಂದುವೆ ಎಂದು ಘೋಷಿಸಿದ ಶರಪೋವಾ ಇನ್ನೂ ಮುಂದುವರೆಸುತ್ತಿರುವುದು ಇದಕ್ಕೆ ಒಂದು ಸಾಕ್ಷಿ.maria_sharapova
ಆಸ್ಟ್ರೇಲಿಯಾದಲ್ಲೂ David Jones ನಂತಹ ದೊಡ್ಡ ಅಂಗಡಿಗಳಲ್ಲಿ “Sugarpova ” ಬ್ರಾಂಡ್ ಮಿಠಾಯಿ $6 ಡಾಲರ್ ಗಳಿಗೆ ಮಾರಾಟಕ್ಕಿದೆ, ಕೆಲವು ಪತ್ರಿಕೆಗಳು ಆಟಗಾರರು ಇಂಥಾ ಅನಾರೋಗ್ಯಕರ ಸಕ್ಕರೆಯ ಪದಾರ್ಥಕ್ಕೆ ಪ್ರೋತ್ಸಾಹ ಮಾಡುವುದು ಸರಿಯಲ್ಲ ಎನ್ನುವವರಿಗೆ ಆಕೆಯ ಏಜೆಂಟ್ Max Eisenbud ಕೊಟ್ಟ ಹೇಳಿಕೆ ಹೀಗೆ “McDonalds ಮತ್ತು Coca Cola ದಂತಹ ಪದಾರ್ಥಗಳಲ್ಲಿ ಇದಕ್ಕೂ ಹೆಚ್ಚು ಸಕ್ಕರೆಯ ಅಂಶವಿದೆ ಅದನ್ನು ಮಾರಾಟ ಮಾಡಲು ಬಳಸುತ್ತಿರುವುದೂ ಪ್ರಖ್ಯಾತ ಆಟಗಾರರನ್ನೇ ” ಖರೆ ಅಲ್ಲವೇ. ಶರಪೋವಾಳ ಸುಂದರ ಮೈಮಾಟ, ಪ್ರತಿ ಹೊಡೆತಕ್ಕೂ ಘರ್ಜಿಸುವ ಆಟ,ಇದರ ಜೊತೆ ಜೊತೆಗೆ ಮಿಠಾಯಿ ಮಾರಾಟ ಎಲ್ಲವೂ ಹೆಚ್ಚು ಹೆಚ್ಚು ಎತ್ತರಕ್ಕೇರುತ್ತಿದೆ, ಅದು ಗೆಲುವಿನ ಗಾಳಿಪಟದಂತೆ ತೋರುತ್ತಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s